ಭಟ್ಕಳ: ರಾಮಮಂದಿರ ನಿರ್ಮಾಣವಾದ ಮೇಲೆ ನಾವು ಮೊದಲ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ರಾಮನ ಮಂದಿರ ತಂದ ಮೋದಿಜಿಯವರಿಗೆ ಧನ್ಯವಾದ ಸಲ್ಲಿಸುವುದಕ್ಕೆ ಪ್ರತಿ ಪ್ರಜೆಗಳಿಗೆ ಇದೊಂದು ಸುವರ್ಣ ಅವಕಾಶ ಎಂದು ಉತ್ತರ ಕನ್ನಡ ಲೋಕಸಭೆಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇದನ್ನೂ ಓದಿ : ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳದಲ್ಲಿ ಬಿರುಸಿನ ಪ್ರಚಾರ

ಅವರು ಪಟ್ಟಣದ ಬಿಜೆಪಿ ಮುಖಂಡ ಕೇದಾರ ಕೊಲ್ಲೆ ಅವರ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಡೀ ದೇಶದಲ್ಲಿ ಕಾಂಗ್ರೆಸ್ ಹತಾಶ ಸ್ಥಿತಿಗೆ ತಲುಪಿದೆ. ಅಧಿಕೃತ ವಿರೋಧ ಪಕ್ಷವಾಗಲು ಅವರಿಗೆ ಸಾದ್ಯವಾಗುವುದಿಲ್ಲ. ಸೋನಿಯಾ ರಾಹುಲ್ ನೇತೃತ್ವದ ಕಾಂಗ್ರೆಸ್ ಯಾರೂ ಒಪ್ಪುವುದಿಲ್ಲ. ಕಾಂಗ್ರೆಸ್ ೨೫೦ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ನಿಲ್ಲಿಸಿ ಬಹುಮತ ಪಡೆಯುತ್ತೇವೆ ಎಂದು ಯಾವ ನೈತಿಕತೆಯಿಂದ ಮಾತನಾಡುತ್ತಾರೊ ತಿಳಿಯುತ್ತಿಲ್ಲ. ಕಾಂಗ್ರೆಸ್ ಮಿತ್ರಪಕ್ಷಗಳು ದಿನಕ್ಕೊಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಾರೆ. ಅವರಿಗೂ ಇವರಿಗೂ ಹೊಂದಾಣಿಕೆ ಇಲ್ಲ. ದಿನಕ್ಕೊಬ್ಬರಂತೆ ಮೈತ್ರಿಕೂಟ ಬಿಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

ರಾಮಮಂದಿರ ನಿರ್ಮಾಣ ದೇಶದ ಜನರ ಶತಮಾನದ ಕನಸಾಗಿತ್ತು. ನರೇಂದ್ರ ಮೋದಿಯವರ ಪ್ರಣಾಳಿಕೆ ಮುಂದಾಲೋಚನೆಯಿಂದ ರಚಿಸಲಾಗಿದೆ. ೨೦೪೭ರಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿದೆ. ಕಾಂಗ್ರೆಸ್ ಪಕ್ಷವೂ ಮುಸ್ಲಿಂ ಲೀಗ್ ನ ಎಡಪಂಥೀಯ ಪಕ್ಷದಂತಿದೆ. ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಪೊರೈಸುವದರಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಅದೇ ವಿಷಯ ಬಿಟ್ಟರೆ ಮತ್ತೆ ಬೇರೆ ವಿಷಯವೇ ಇಲ್ಲದೆ ಪರದಾಡುತ್ತಿದ್ದಾರೆ. ಕುಡಿಯುವ ನೀರು, ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭ್ರಷ್ಟಾಚಾರ, ಪಾಕಿಸ್ತಾನ ಜಿಂದಾಬಾದ್, ಪೊಲೀಸ್ ಠಾಣೆ ಸುಟ್ಟವರ ವಿರುದ್ಧ ಮೃದುಧೋರಣೆ ತಳೆಯುತ್ತಾರೆ ಎಂದು ಆರೋಪಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ, ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಉತ್ತರಕನ್ನಡ ಲೋಕಸಭಾ ಸಂಚಾಲಕ ಗೋವಿಂದ ನಾಯ್ಕ, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ, ಮುಖಂಡರಾದ ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ ಆಸರಕೇರಿ, ಶ್ರೀನಿವಾಸ ನಾಯ್ಕ, ಇತರರು ಇದ್ದರು.