ಭಟ್ಕಳ : ಮೇ ೨೧ರಿಂದ ೨೬ರ ತನಕ ಪುಣೆಯ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಮೂರು ಚಿನ್ನ, ಒಂದು ಕಂಚು ಲಭಿಸಿದೆ. ದೇಶದ 32 ರಾಜ್ಯಗಳಿಂದ ಕಿಕ್ ಬಾಕ್ಸಿಂಗ್ ಪಟುಗಳು ಭಾಗವಹಿಸಿದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟುಗಳು ಸಾಧನೆ ಮಾಡಿದ್ದಾರೆ. ೭ ರಿಂದ ೯ ವರ್ಷ ವಯೋಮಿತಿಯ ಬಾಲಕಿಯರ -೧೮ಕೆಜಿ ಪಾಯಿಂಟ್ ಪೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ, -೧೮ಕೆಜಿ ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಪ್ರಣವಿ ರಾಮಚಂದ್ರ ಕಿಣಿ ಮತ್ತು ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಅವನಿ ಸೂರಜ್ ರಾವ್ ಚಿನ್ನದ ಪದಕ ಪಡೆದಿದ್ದಾರೆ.
ಇದನ್ನೂ ಓದಿ : ಮೇ ೨೭ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಬಾಲಕರ -೨೪ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಮೊಹಮ್ಮದ್ ರಯ್ಯಾನ್ ಐದನೇ ಸ್ಥಾನ ಪಡೆದಿದ್ದಾರೆ. ೧೦-೧೩ ವರ್ಷ ವಯೋಮಾನದ ಬಾಲಕರ -೩೨ಕೆಜಿ ವಿಭಾಗದಲ್ಲಿ ನಯಿಮ್ ಅಹ್ಮದ್ ಗಂಗಾವಳಿ ಕಂಚಿನ ಪದಕ ಗಳಿಸಿದ್ದಾರೆ. -೨೮ಕೆಜಿ ವಿಭಾಗದಲ್ಲಿ ಮೊಹಮ್ಮದ್ ಮುಸ್ತಾಫೀಜ್ ಕೋಲಾ 17ನೇ ಸ್ಥಾನ ಮತ್ತು ೧೩-೧೫ ವರ್ಷ ವಯೋಮಾನದ -೪೨ಕೆಜಿ ವಿಭಾಗದಲ್ಲಿ ನಿಹಾಲ್ ಹಸನ್ ಸಾದ ಒಂಭತ್ತನೇ ಸ್ಥಾನ ಪಡೆದರೆ, -೬೩ಕೆಜಿ ವಿಭಾಗದಲ್ಲಿ ಮೊಹಮ್ಮದ್ ಸಲಾಹ ಐದನೇ ಸ್ಥಾನ ಗಳಿಸಿದ್ದಾರೆ.
ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಈ ಎಲ್ಲಾ ಪಟುಗಳಿಗೆ ವಾಕೊ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ಅಧ್ಯಕ್ಷ ಸಂತೋಷ ಕೆ., ಪ್ರಧಾನ ಕಾರ್ಯದರ್ಶಿ ಪೂಜಾ ಹರ್ಷ, ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಕೋಚ್ ಹರ್ಷ ಶಂಕರ, ಉತ್ತರಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ, ನಾಗಶ್ರೀ ಮಾರ್ಷಲ್ ಆರ್ಟ್ಸ್ ಕಿಕ್ ಬಾಕ್ಸಿಂಗ್ ಕೋಚ್ ನಾಗಶ್ರೀ ನಾಯ್ಕ, ಏಲೀಯನ್ಸ್ ಮಾರ್ಷಲ್ ಆರ್ಟ್ಸ್ ಕೋಚ್ ಇಸ್ಮಾಯಿಲ್, ರೆವೊಲ್ಯೂಷನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕೋಚ್ ಜುಹೆಬ್, ಅಕ್ಫಾ ಅಕಾಡೆಮಿಯ ಕೋಚ್ ಅಮರ್ ಶಾಬಂದ್ರಿ ಅಭಿನಂದನೆ ತಿಳಿಸಿದ್ದಾರೆ.