ಅಂಕೋಲಾ : ಮಂಗಳೂರು-ಪೋರಬಂದರ ಮಧ್ಯ
ಸಂಚರಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಆಪಲ್ ಮೊಬೈಲ್ ಫೋನ್ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮಂಗಳೂರು ನಿವಾಸಿ ಮೀನಾಕ್ಷಿಬೆನ್ ಚಂದ್ರಕಾಂತ ಆಪಲ್ ಕಂಪನಿಯ ಮೊಬೈಲ್ ಫೋನ್ ಕಳಕೊಂಡವರು. ಜೂನ್ ೨೪ರಂದು ಈ ಕಳ್ಳತನ ನಡೆದಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ : ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಬೈಕ್ ಡಿಕ್ಕಿ
ಗೋಕರ್ಣ ರಸ್ತೆ ರೈಲ್ವೇ ಸ್ಟೇಶನ್ ಹತ್ತಿರ ರೈಲು ತಲುಪಿದಾಗ ಬೆಳಗಿನ ಜಾವ ೧-೧೫ ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕೈಚಳಕ ತೋರಿಸಿದ್ದಾರೆ. ರೈಲಿನಲ್ಲಿ ಮಹಿಳೆಯ ಬಳಿ ಇದ್ದ ೩೦,೦೦೦ ರೂಪಾಯಿ ಮೌಲ್ಯದ ಮೊಬೈಲ್ ಫೋನ್, ಪಾನ್ ಕಾರ್ಡ್ ಮತ್ತು ೫೦೦ ರೂ. ನಗದು ದೋಚಿರುವುದಾಗಿ ದೂರಲಾಗಿದೆ.
ಇದನ್ನೂ ಓದಿ : ಅಳ್ವೆಕೋಡಿಯಲ್ಲಿ ಇಂದು ಲಕ್ಷ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ
ದೂರು ಸ್ವೀಕರಿಸಿದ್ದ ಕಾರವಾರ ಕೊಂಕಣ ರೈಲ್ವೆ ಆರ್.ಪಿ.ಎಫ್. ಕಚೇರಿಯವರು ಪೊಲೀಸ್ ಅಧೀಕ್ಷಕರ ಮೂಲಕ ಅಂಕೋಲಾ ಠಾಣೆಗೆ ಪ್ರಕರಣ ರವಾನಿಸಿದ್ದರು. ದೂರು ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕುಮಟಾ ತಾಲೂಕಿನಲ್ಲಿ ೧೦ ಡೆಂಗ್ಯೂ ಪ್ರಕರಣ ಪತ್ತೆ