ಭಟ್ಕಳ : ವಧೆ ಮಾಡುವ ಉದ್ದೇಶದಿಂದ ತಮ್ಮ ವಾಸದ ಮನೆಯ ಪಕ್ಕದ ತೋಟದ ತೆಂಗಿನ ಮರಕ್ಕೆ ಕಟ್ಟಿ ಹಾಕಿದ್ದ ನಾಲ್ಕು ಎತ್ತುಗಳನ್ನು ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ಮಾಡಿ ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಬೆಳಲಖಂಡದಲ್ಲಿ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಆರೋಪಿಯಾದ ಮೊಹ್ಮದ ಮಸೂದ್ ಎನ್ನುವವರ
ವಾಸದ ಮನೆಯ ಪಕ್ಕದಲ್ಲಿರುವ ಅರ್ಷದ್ ಮಹ್ಮದ ಇಕ್ಬಾಲ್ ಖಾನ್ ರವರ ತೋಟದಲ್ಲಿ ೪ ಎತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಧೆ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಖರೀದಿ ಮಾಡಿಕೊಂಡು ಬಂದು ಅವುಗಳನ್ನು ತೆಂಗಿನ ಮರಗಳಿಗೆ ಕಟ್ಟಿಡಲಾಗಿತ್ತು. ಈ ವೇಳೆ ಶನಿವಾರ ಮಧ್ಯಾಹ್ನ ೧ ಗಂಟೆಯ ವೇಳೆಗೆ ೪ ಎತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ವಿಶ್ವ ತಂಬಾಕು ವಿರೋಧಿ ದಿನಾಚರಣೆ