ಭದ್ರಾವತಿ : ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಅಘೋಷಿತ ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿಗಳನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳುವುದು ಅಪರಾಧ. ಅಂಥವರಿಗೆ 7 ವರ್ಷ ಜೈಲುಶಿಕ್ಷೆ ಮತ್ತು ರೂ 25000 ಗಳ ದಂಡ ವಿಧಿಸಲಾಗುತ್ತದೆ ಎಂದು ಉಪ ಸಂರಕ್ಷಣಾಧಿಕಾರಿ ಎಂ.ವಿ. ಅಶೀಷ್ ರೆಡ್ಡಿ ತಿಳಿಸಿದರು.
ಅವರು ಉಪ ಸಂರಕ್ಷಣಾಧಿಕಾರಿ ಕಛೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ : ಕಬ್ಬಿನ ಎಫ್ ಆರ್ ಪಿ ಹೆಚ್ಚಿಸಿದ ಕೇಂದ್ರ ಸರ್ಕಾರ
1972ರಲ್ಲಿ ಪ್ರಥಮವಾಗಿ ವನ್ಯ ಪ್ರಾಣಿಗಳ ವಸ್ತುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಯಿತು. ಈ ಕಾನೂನು ಅಡಿ ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿಗಳನ್ನು ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಇಟ್ಟುಕೊಳ್ಳುವುದು ಅಪರಾಧ. ಅಂತಹ ವಸ್ತುಗಳು ಇದ್ದಲ್ಲಿ ಸರ್ಕಾರಕ್ಕೆ ಒಪ್ಪಿಸಲು 2024 ರ ಏಪ್ರಿಲ್ 9 ಕಡೆಯ ದಿನಾಂಕವಾಗಿದೆ ಎಂದು ತಿಳಿಸಿದರು.
ಪ್ರೇರಣಾದಾಯಕ ಮಾತು : https://m.facebook.com/story.php?story_fbid=pfbid02MESk4QbF41N8tz9qcPhSjYs7MnrZCc8cPfvzCSYWcKMBpNsSiUC6EuhnMzSsYbNcl&id=61555144611326&mibextid=Nif5oz
ಸದರಿ ನಿಯಮದ ಪ್ರಕಾರ ಸಾರ್ವಜನಿಕರು , ಸಂಘ ಸಂಸ್ಥೆ ಅಘೋಷಿತ ವನ್ಯಜೀವಿ / ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು ಇದ್ದಲ್ಲಿ , ಹತ್ತಿರದ ಅರಣ್ಯ ಇಲಾಖಾ ಕಛೇರಿಗೆ ತೆರಳಿ ಅರ್ಜಿ ನಮೂನೆ 1ನ್ನು ತುಂಬಿ, 100 ರೂ.ಗಳ ಛಾಪಾಕಾಗದದಲ್ಲಿ ಮುದ್ರಿಸಿ ನೋಟರೈಸ್ ಮಾಡಿಸಬೇಕು. ಅದನ್ನು ತಮ್ಮಲ್ಲಿದ್ದ ವನ್ಯಜೀವಿಗಳ ವಸ್ತುಗಳೊಂದಿಗೆ ದ್ವಿ ಪ್ರತಿಯೊಂದಿಗೆ ಕಛೇರಿಗೆ ತಲುಪಿಸಬೇಕು ಎಂದು ಮಾಹಿತಿ ನೀಡಿದರು. ನಂತರ ಕಛೇರಿ ಅಧಿಕಾರಿಗಳು ಸ್ವೀಕೃತಿ ಪತ್ರ ನೀಡುವರು ಎಂದರು.
ಆಹಾರವನ್ನು ಹುಡುಕಿ ನಾಡಿಗೆ ಬರುವ ಕಾಡುಪ್ರಾಣಿಗಳ ಸುಳಿವನ್ನು ತಿಳಿಯಲು ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕಾಡು ಪ್ರಾಣಿಗಳಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರ ನಿಗದಿ ಪಡಿಸಿದ ಪರಿಹಾರ ನೀಡುತ್ತಿದ್ದೇವೆ. ಇದರಡಿ ಈಗಾಗಲೇ ರೂ 40 ಲಕ್ಷ ಪರಿಹಾರ ಕೊಡಲಾಗಿದೆ. ಇನ್ನು 32 ಲಕ್ಷ ಕೊಡುವುದಿದೆ ಎಂದರು.