ಭಟ್ಕಳ : ಇಲ್ಲಿನ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆ ಐಸಿಎಸ್‌ಇ ಪರೀಕ್ಷೆಯಲ್ಲಿ ಸತತ ೧೦ನೇ ಸಾಲಿನಲ್ಲೂ ಶೇಕಡಾ ೧೦೦ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಶಾಲೆಯ ವಿದ್ಯಾರ್ಥಿಗಳಾದ ಅನುಷ್ಕಾ ನಾಗರಾಜ ದೇಶಭಂಡಾರಿ ೯೪.೮೦%, ಪೂರ್ಣಿಮಾ ಭೋಸಲೆ ೯೪.೬೦%, ಶಮಂತಕುಮಾರ ನಾಯ್ಕ ೯೧.೬೦%, ಅವನಿ ಶ್ರೀನಿವಾಸ ಪಡಿಯಾರ ೯೧.೬೦%, ಸಂಕೇತ ಭಟ್ ೯೧.೪೦%, ಕಾರ್ತಿಕ ಕೇಶವ ನಾಯ್ಕ ೯೦.೪೦% ಗುರುದೀಪ ಪಾಂಡುರಂಗ ನಾಯ್ಕ ೯೦.೪೦% ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಇದನ್ನೂ ಓದಿ : ಅಪರೂಪದ ಅಜ್ಜಿ ಕೈತುತ್ತು ಕಾರ್ಯಕ್ರಮ

ಐಸಿಎಸ್ಇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಂಜಲಿ ಪಬ್ಲಿಕ್ ಶಾಲೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.