ಭಟ್ಕಳ: ಪಟ್ಟಣದ ಸ್ನೇಹ ವಿಶೇಷ ಶಾಲೆಯ ಮಕ್ಕಳ ನಿಷ್ಕಲ್ಮಶ ಪ್ರೀತಿ, ಶುಭ ಹಾರೈಕೆಗಳಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಎಂದು ಕರ್ನಾಟಕ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು.
ಇದನ್ನೂ ಓದಿ : ಆಧುನಿಕತೆ ಭರಾಟೆಯಲ್ಲೂ ಆಲೆಮನೆ ಇನ್ನೂ ಜೀವಂತ !
ಅವರು ಪಟ್ಟಣದ ಕೋಕ್ತಿನಗರದ ಸ್ನೇಹ ವಿಶೇಷ ಶಾಲೆಯ ಮಕ್ಕಳ ಜತೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡರು. ಬಳಿಕ ಮಾತನಾಡಿದ ಅವರು, ಶ್ರೀದೇವರ ಕೃಪೆ ಗುರುಹಿರಿಯರ ಆಶೀರ್ವಾದ ಹಿತೈಷಿಗಳ ಹಾರೈಕೆಗಳೊಂದಿಗೆ ಪ್ರತಿವರ್ಷದಂತೆ ಈ ವರ್ಷ ಕೂಡ ನನ್ನ ಜನ್ಮದಿನವನ್ನು ಆಚರಿಸುವ ಅವಕಾಶ ಸಿಕ್ಕಿದೆ. ವಿಶೇಷ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಾನು ಸದಾ ಸಿದ್ದ ಎಂದು ಭರವಸೆ ನೀಡಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬಳಿಕ ಮಕ್ಕಳೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸ್ನೇಹಾ ವಿಶೇಷ ಶಾಲೆಯ ಮುಖ್ಯಸ್ಥೆ ಮಾಲತಿ ಉದ್ಯಾವರ, ಸಹಶಿಕ್ಷಕಿಯರು, ಈಶ್ವರ ನಾಯ್ಕ ಅಭಿಮಾನಿ ಬಳಗದ ಸಂಗಡಿಗರು ಮತ್ತು ಇತರರು ಇದ್ದರು.
ಅದಾದ ಬಳಿಕ ಭಟ್ಕಳದ ತಾಲೂಕಾಸ್ಪತ್ರೆಗೆ ತೆರಳಿ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಅವರಿಂದ ಆಶೀರ್ವಾದ ಪಡೆದರು. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.