ಹೊನ್ನಾವರ: ವಿಶೇಷಚೇತನ ಮಕ್ಕಳಲ್ಲಿ ಪಾಲಕರು ಹಾಗೂ ಸಾರ್ವಜನಿಕರು ಆತ್ಮವಿಶ್ವಾಸ ತುಂಬಿದಲ್ಲಿ ಅವರು ವಿಶೇಷ ಸಾಧಕರು ಆಗುತ್ತಾರೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಅಭಿಪ್ರಾಯಪಟ್ಟರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಂಡ ದಿಶಾ ವಿಶೇಷಚೇತನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷಚೇತನರನ್ನು ಸಂಬಾಳಿಸುವುದು ಕಷ್ಟವಾಗುತ್ತದೆ. ಪಾಲಕರು ಇಂತಹ ಮಕ್ಕಳಿಗೆ ಹಾರೈಕೆ ಮಾಡಿ ಪೋತ್ಸಾಹ ನೀಡಿದ್ದೇಯಾದರೆ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ನಮ್ಮ ತಾಲೂಕಿನ ಸಮರ್ಥ ರಾವ್ ಸಾಕ್ಷಿಯಾಗಿದ್ದಾರೆ. ಚೆಸ್ ಕ್ರೀಡೆಯಲ್ಲಿ ಈತ ರಾಜ್ಯ ರಾಷ್ಟ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದವರೆಗೂ ಸಾಧನೆ ಮಾಡುವ ಮೂಲಕ ಕೀರ್ತಿ ತಂದಿದ್ದಾನೆ. ಕಠಿಣ ಪರಿಶ್ರಮದಿಂದ ವಿಶೇಷ ಚೇತನರು ಸಾಧನೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾನೆ. ಸಮಾಜ ಕೂಡ ಇಂತಹ ಮಕ್ಕಳಿಗೆ ಅಯ್ಯೋ ಪಾಪ ಎನ್ನುವುದಕ್ಕಿಂತ ಪ್ರೀತಿಸಿ, ಸಹಕಾರ ನೀಡಿ, ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಇದನ್ನೂ ಓದಿ : ಡೆಂಗ್ಯೂ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮ

ಎ.ಡಿ.ಪಿ ಸಂಯೋಜಕಿ ಸ್ಮೀತಾ ಗೌಡ ಮಾತನಾಡಿ, ಶಿಕ್ಷಣ, ಆರೋಗ್ಯ, ರೈತ ವರ್ಗದವರಿಗೆ ಹಲವು ರೀತಿಯ ಸಮುದಾಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಸ್ಪಂದನ ಸಂಸ್ಥೆ ಕಾರ್ಯ ಪ್ರಶಂಸನಾರ್ಹವಾಗಿದೆ. ಮಕ್ಕಳ ದೈಹಿಕ ಸಾಮರ್ಥ್ಯ ಬಲವರ್ಧಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ. ಸರ್ಕಾರದ ಮಟ್ಟದಲ್ಲಿಯೂ ಇಂತಹ ಮಕ್ಕಳಿಗಾಗಿ ಹಲವು ಕಾರ್ಯಕ್ರಮವಿದೆ. ಪಾಲಕರು ಈ ಬಗ್ಗೆ ಹೆಚ್ಚಿನ ಗಮನಹರಿಸುವ ಮೂಲಕ ಅದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ : ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್

ಸಾಹಿತಿಗಳಾದ ವಿನಾಯಕ ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಂಡೊಸಲ್ಪಾನ್ ಕಾರಣದಿಂದಾಗಿಯೂ ಇಂತಹ ಮಕ್ಕಳಿದ್ದಾರೆ. ಸ್ಕೊಡವೆಸ್ ಜೊತೆ ಹಲವು ಸಂಘ ಸಂಸ್ಥೆಗಳು, ಸರ್ಕಾರದ ಅರೋಗ್ಯ ಇಲಾಖೆಯು ಇಂತಹ ಮಕ್ಕಳ ಆರೋಗ್ಯ , ಶಿಕ್ಷಣಕ್ಕೆ ಹೆಚ್ಚಿನ ಗಮನಹರಿಸುತ್ತಿದೆ. ಇಂದು ಶೈಕ್ಷಣಿಕ ಸಾಮಗ್ರಿ ನೀಡುವ ಮೂಲಕ ಪಾಲಕರ ಆರ್ಥಿಕ ಹೊರೆ ತಪ್ಪುವಲ್ಲಿ ಸಂಘಟನೆಯ ಕಾರ್ಯ ಅಭಿನಂದನಾರ್ಹ ಎಂದರು.

ಇದನ್ನೂ ಓದಿ : ಓಮ್ನಿ – ಟೂರಿಸ್ಟ್ ಬಸ್ ನಡುವೆ ಡಿಕ್ಕಿ; ಭಟ್ಕಳದ ವ್ಯಕ್ತಿ ಸಾವು

ಕವಲಕ್ಕಿಯ ಎಸ್.ಎಸ್.ಪಿ.ಯು ಕಾಲೇಜಿನ ವಿಶ್ರಾಂತ ಉಪನ್ಯಾಸಕ ಕೆ.ವಿ.ಹೆಗಡೆ ಮಾತನಾಡಿ, ವಿಶೇಷ ಚೇತನ ವಿದ್ಯಾರ್ಥಿಗಳಲ್ಲಿ ಸಮಾಜದಿಂದ ನಾವು ಹೊರಗಿದ್ದೇವೆ ಎನ್ನುವ ಭಾವನೆ ಬೇಡ. ಸಮಾಜ ನಿಮ್ಮೊಂದಿಗೆ ಇದೆ ಎನ್ನುವುದಕ್ಕೆ ಇಂತಹ ರಚನಾತ್ಮಕ ಕಾರ್ಯಕ್ರಮ ಸಾಕ್ಷಿಯಾಗಿದೆ. ಇಂತಹ ವಿದ್ಯಾರ್ಥಿಗಳ ಸಾಧನೆಗೆ ಪೊತ್ಸಾಹಿಸುವ ಕಾರ್ಯವಾಗಬೇಕಿದೆ ಎಂದರು.

ಇದನ್ನೂ ಓದಿ : ಅಳ್ವೆಕೋಡಿಯಲ್ಲಿ ಪುನರ್ ಪ್ರತಿಷ್ಠಾ ಸುವರ್ಣ ಮಹೋತ್ಸವ ನಾಳೆಯಿಂದ

ಶಿಕ್ಷಣ ಇಲಾಖೆಯ ಅಧಿಕಾರಿ ಸೀಮಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಟ್ರಸ್ಟ ಗಣಪತಿ ಹೆಗಡೆ ಸ್ವಾಗತಿಸಿದರು. ಪ್ರಕಾಶ ನಾಯ್ಕ ವಂದಿಸಿದರು. ಸುಧಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ : ಸಾಲ ವಸೂಲಿಗೆ ಹೋದಾಗ ಹೊಡೆದಾಟ; ದೂರು – ಪ್ರತಿದೂರು

ತಾಲೂಕಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಮತ್ತು ರಕ್ಕಸ್ ವೈರಲೆಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.