ಯಲ್ಲಾಪುರ : ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಮತ್ತು ಮಾನಸಿಕ ಒತ್ತಡದಿಂದ ಬಳಲುವುದು ಕಾಣುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ ಅವರ ಬದುಕು ಸುಂದರವಾಗುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಲೇಖಕ ಬೀರಣ್ಣ ನಾಯಕ್ ಮೊಗಟಾ ವಿಶ್ವದರ್ಶನ ಪಿಯು ಕಾಲೇಜಿನಲ್ಲಿ ಹೇಳಿದರು.
ಟಿ೨೦ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ, ಭಟ್ಕಳದಲ್ಲಿ ವಿಜಯೋತ್ಸವ ಹೇಗಿತ್ತು ಗೊತ್ತಾ? ಫೇಸ್‌ಬುಕ್ ವಿಡಿಯೋ / ಇನ್ಸ್ಟಾಗ್ರಾಂನಲ್ಲಿ ವಿಡಿಯೋ
ಅವರು ವಿಶ್ವದರ್ಶನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ನೂತನ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮಕ್ಕಳು ವಿಶ್ವದರ್ಶನ ಕಾಲೇಜನ್ನು ಆಯ್ಕೆ ಮಾಡಿಕೊಂಡಿರುವುದು ಉತ್ತಮ ನಿರ್ಧಾರವಾಗಿದೆ. ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಓದುವುದು ಒಂದು ಸುದೈವ. ಇದು ವಿದ್ಯಾರ್ಥಿಗಳು ಗುರಿ ಮುಟ್ಟಲು ಮೆಟ್ಟಿಲಾಗುತ್ತದೆ ಎಂದರು.
ಭಟ್ಕಳದ ಸುಧೀಂದ್ರ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚರಣೆ : ಫೇಸ್‌ಬುಕ್ ರೀಲ್ / ಇನ್ಸ್ಟಾಗ್ರಾಂನಲ್ಲಿ ವಿಡಿಯೋ
ಕಾಲೇಜಿನ ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿಗಳಾದವರಿಗೆ ಮಹತ್ತರವಾದ ಜವಾಬ್ದಾರಿ ಇರುತ್ತದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಭಿಮಾನ ಹೆಚ್ಚಿಸುವ, ಪ್ರೇರಣಾದಾಯಕವಾದ, ಆತ್ಮವಿಶ್ವಾಸ ಇಮ್ಮಡಿಗೊಳಿಸುವ ಮಾನಸಿಕ ಒತ್ತಡವನ್ನು ದೂರಗೊಳಿಸುವ, ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ : ವಿಜಯೋತ್ಸವ ವೇಳೆ ಟ್ರಾಫಿಕ್ ಜಾಮ್; ಲಾಠಿ ಬೀಸಿದ ಪೊಲೀಸರು
ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಅತಿಯಾದ ಮೊಬೈಲ್ ಬಳಕೆಯು ಅಪಾಯಕಾರಿಯಾಗಿದೆ. ಮೊಬೈಲ್ ಬಳಕೆಯು ಹಿತ ಮಿತದಲ್ಲಿರಬೇಕು ಮತ್ತು ಅಧ್ಯಯನಕ್ಕೆ ಪೂರಕವಾಗಿರಬೇಕು ಎಂದು ತಿಳಿಸಿದ ಅವರು, ಹಾಸ್ಯ ಚಟಾಕಿಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಲಹೆಗಳನ್ನು ನೀಡಿದರು.
ಇದನ್ನೂ ಓದಿ : ಗೋರೆ ದೇವಸ್ಥಾನದಲ್ಲಿ ಕಳ್ಳತನ ನಡೆದಾಗ ಇದ್ದ ಬೈಕ್ ಯಾರದ್ದು?
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಮ್ಮಲ್ಲಿಯ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ನಂತರ ಹೊರ ಜಿಲ್ಲೆಗಳಿಗೆ ತೆರಳುತ್ತಾರೆ. ಆದರೆ ಅದರಲ್ಲಿ ಅರ್ಧ ಪ್ರಮಾಣದ ವಿದ್ಯಾರ್ಥಿಗಳು ಅಲ್ಲಿಯ ವಾತಾವರಣ, ಆಹಾರ ಪದ್ಧತಿ, ಶಿಕ್ಷಣ ಪದ್ಧತಿಗೆ ಒಗ್ಗಿಕೊಳ್ಳಲಾರದೆ ವಾಪಸ್ ಹಿಂತಿರುಗುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಸ್ಥಳೀಯವಾಗಿಯೇ ಉನ್ನತ ದರ್ಜೆಯ ಶಿಕ್ಷಣ ಸಿಗುವಂತಾಗಲು ವಿಶ್ವದರ್ಶನ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವುದಕ್ಕಾಗಿ ಒತ್ತಡಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಲಾಭವಾಗುತ್ತದೆ ಹೊರತು ವಿದ್ಯಾರ್ಥಿಗಳಿಗಲ್ಲ. ಆದರೆ ವಿಶ್ವದರ್ಶನ ಶಿಕ್ಷಣ ಸಮೂಹ ಸ್ಥಳೀಯ ಪರಿಸರ, ನಮ್ಮ ಸಂಸ್ಕೃತಿ, ಕುಟುಂಬದೊಂದಿಗೆ ಉತ್ತಮವಾದ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಶೀಘ್ರದಲ್ಲಿಯೇ ವಿಶ್ವದರ್ಶನದಲ್ಲಿ ದೂರದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಪಿಯು ಶಿಕ್ಷಣಕ್ಕಾಗಿ ವಿಶ್ವದರ್ಶನವನ್ನು ಆಯ್ಕೆ ಮಾಡಿಕೊಂಡ ಎಲ್ಲ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ನಿಮ್ಮ ಆಯ್ಕೆಯು ಸರಿಯಾಗಿದೆ. ನಮ್ಮ ಶಿಕ್ಷಣ ಸಂಸ್ಥೆ ಮೂಲಕ ಖಂಡಿತ ನಿಮ್ಮ ಭವಿಷ್ಯ ಉತ್ತಮಗೊಳ್ಳುವ ಶಿಕ್ಷಣ ದೊರೆಯುತ್ತದೆ. ನೀವು ಏನೇ ಸಾಧನೆ ಮಾಡಿದರು ಕೂಡ ಒಬ್ಬ ಜವಾಬ್ದಾರಿಯುತ ನಾಗರಿಕರಾಗುವುದು ಮುಖ್ಯವಾಗಿದೆ. ಆದ್ದರಿಂದ ತಂದೆ, ತಾಯಿ ಮತ್ತು ಗುರುಗಳಿಗೆ ವಿಧೇಯರಾಗಿ ಇರುತ್ತೇನೆ ಎಂಬ ಸಂಕಲ್ಪದೊಂದಿಗೆ ಮುನ್ನಡೆಯಿರಿ. ನಿಮ್ಮ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ : ಶಾಲಾ ಸಂಸತ್ ಚುನಾವಣೆ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಯಶಸ್ವಿ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಸತ್ತಿನ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರ ನಡೆಯಿತು. ಕಾಲೇಜಿನಲ್ಲಿ ಕಳೆದ ವಾರ ನಡೆಸಿದ ಚುನಾವಣೆಯಲ್ಲಿ ಒಟ್ಟು ಐದು ವಿಭಾಗಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿತ್ತು. ಬಾಲಕರ ವಿಭಾಗದ ಪ್ರತಿನಿಧಿಯಾಗಿ ವಿನಯ ನಾಯ್ಕ, ಬಾಲಕಿಯರ ವಿಭಾಗದ ಪ್ರತಿನಿಧಿಯಾಗಿ ಹರ್ಷಿತಾ ಶೇಟ, ಕ್ರೀಡಾ ವಿಭಾಗದ ಪ್ರತಿನಿಧಿಯಾಗಿ ಪ್ರಥಮ ಪೂಜಾರಿ, ಸಾಂಸ್ಕೃತಿಕ ವಿಭಾಗದ ಪ್ರತಿನಿಧಿಯಾಗಿ ರೋನಕ್ ಗೋಸಾವಿ, ಶಿಸ್ತು ಪಾಲನಾ ಪ್ರತಿನಿಧಿಯಾಗಿ ವಾಗೀಶ ಭಟ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಆವಾರದಲ್ಲಿ ಅತಿಥಿಗಳು, ಸಂಸ್ಥೆಯ ಅಧ್ಯಕ್ಷರು ಮತ್ತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಸಿ ನೇಡುವುದರ ಮೂಲಕ ವನಮಹೋತ್ಸವ ಆಚರಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಅಂಬುಲೆನ್ಸ್ ಪಲ್ಟಿ
ಕಾರ್ಯಕ್ರಮವನ್ನು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ದ್ವಿತೀಯ ಪಿಯು ವಿದ್ಯಾರ್ಥಿನಿಯರಾದ ಅಪೂರ್ವ, ಶ್ರಾವ್ಯ ಪ್ರಾರ್ಥಿಸಿದರು. ಪಿಯು ಕಾಲೇಜಿನ ಉಪ ಪ್ರಾಚಾರ್ಯ ನಾಗರಾಜ ಹೆಗಡೆ ಗಣ್ಯರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಉಪನ್ಯಾಸಕಿ ಕವಿತಾ ಹೆಬ್ಬಾರ ನಡೆಸಿಕೊಟ್ಟರು. ಉಪನ್ಯಾಸಕ ರಮೇಶ ನಾಯಕ ವಂದನಾರ್ಪಣೆ ಸಲ್ಲಿಸಿದರು. ಸಂಸ್ಕೃತ ಉಪನ್ಯಾಸಕ ರವೀಂದ್ರ ಶರ್ಮಾ ನಿರೂಪಣೆಯಲ್ಲಿ ಕಾರ್ಯಕ್ರಮ ಜರುಗಿತು.