ಯಲ್ಲಾಪುರ: ಮಹಾತ್ಮರನ್ನು ಸ್ಮರಿಸುವ ಮೂಲಕ ತ್ಯಾಗ ಬಲಿದಾನ ಮಾಡಿದ ವೀರರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಸ್ತುತ್ಯಾರ್ಹವಾಗಿದೆ ಎಂದು ವಿಸ್ತಾರ ನ್ಯೂಸ್‌ ಸಿಇಓ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟರು.
ಇಂದು ಪಟ್ಟಣದಲ್ಲಿ ವಜ್ರಳ್ಳಿಯ ವೀರ ಸಾವರ್ಕರ ಪ್ರತಿಮೆ ಸ್ಥಾಪನೆಗೆ ಸಂಬಂಧಪಟ್ಟ ‌ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ, ನಂತರ ಕಾಯ್ರಕ್ರಮದ ಕುರಿತಂತೆ ಸಲಹೆ ಸೂಚನೆ ನೀಡಿ ಮಾತನಾಡಿದ ಅವರು, ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ. ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕರಾಗಿದ್ದರು. ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು ಅವರನ್ನು ಚಾಣಕ್ಯ ನೀತಿಯವರಾಗಿಯೂ ಭಾವಿಸುತ್ತಾರೆ ಎಂದರು.
ಭೇಟಿಯ ವೇಳೆ ಸಾವರ್ಕರ್ ಪ್ರತಿಮೆ ಸ್ಥಾಪನೆ ಸಂಘಟನೆಯ ಪ್ರಮುಖರಾದ ವಿ.ಎನ್ .ಭಟ್ಟ ನಡಿಗೆಮನೆ, ಜಿ.ಎನ್ ಕೋಮಾರ, ಜಿ.ಆರ್ ಭಾಗ್ವತ, ಗಣಪತಿ ಮಾನಿಗದ್ದೆ, ನವೀನ ಕಿರಗಾರಿ, ರಾಘವೇಂದ್ರ ಭಟ್ಟ, ಅವಿನಾಶ್ ಕೋಮಾರ, ಮಹೇಶ ಗಾಂವ್ಕರ, ರಾಜಶೇಖರ ಬಾರೆಮನೆ, ಶ್ರೀರಾಮ ಭಾಗ್ವತ, ಶ್ರೀಧರ ಭಟ್ಟ ಉಪಸ್ಥಿತರಿದ್ದರು.