ಭಟ್ಕಳ: ಮೈಸೂರಿನ ವೇದಶಾಸ್ತ್ರ ಪೋಷಣೀ ಸಭಾದ ಶತೋತ್ತರ ಸಂಭ್ರಮದಲ್ಲಿ ತಾಲ್ಲೂಕಿನ ಹಡೀಲಿನ ವೇದಮೂರ್ತಿ ಸುಬ್ರಹ್ಮಣ್ಯ ಉಪಾಧ್ಯಾಯ ಅವರಿಗೆ ವೈದಿಕ ಪ್ರಯೋಗ ನಿಷ್ಣಾತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವೇದಮೂರ್ತಿ ಸುಬ್ರಹ್ಮಣ್ಯ ಉಪಾಧ್ಯಾಯರು ವೈದಿಕಕರ್ಮದಲ್ಲಿ ಪಾಂಡಿತ್ಯಗಳಿಸಿದ್ದಲ್ಲದೇ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಅವರಿಗೆ ವೈದಿಕ ಪ್ರಯೋಗ ನಿಷ್ಣಾತ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇದನ್ನೂ ಓದಿ : ಕಾಸ್ಮುಡಿ ಹನುಮಂತ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ 29ರಿಂದ
ಸುಬ್ರಹ್ಮಣ್ಯ ಉಪಾಧ್ಯಾಯರು ಭವತಾರಿಣಿ ವಲಯದ ಪುರೋಹಿತರಾಗಿದ್ದು, ವಲಯದ ಧಾರ್ಮಿಕ ಪ್ರಧಾನರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರು ವೈದಿಕ ಪಂಡಿತರಾಗಿ, ಸಮಾಜದ ಹಿರಿಯ ಮಾರ್ಗದರ್ಶಕರಾಗಿದ್ದಾರೆ. ತಾಳಮದ್ದಲೆ ಅರ್ಥದಾರಿಗಳೂ ಆಗಿರುವ ಇವರಿಗೆ ವೈದಿಕ ಪ್ರಯೋಗ ನಿಷ್ಣಾತ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಭವತಾರಿಣೀ ವಲಯದ ಪದಾಧಿಕಾರಿಗಳು, ಕಿತ್ರೆ ದೇವಿಮನೆ ಆಡಳಿತ ಮಂಡಳಿ, ಶಿವಶಾಂತಿಕಾ ಕಲಾವರ್ಧಕ ಸಂಘದ ಪ್ರತಿನಿಧಿಗಳು, ಸಮಾಜ ಬಾಂಧವರು, ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.
ಈ ವಿಡಿಯೋ ನೋಡಿ : https://www.facebook.com/share/v/z2aQ5zDkQjDWxjV9/?mibextid=oFDknk