ಹೊನ್ನಾವರ; ಸಾರ್ವಜನಿಕರ ಕೆಲಸ ಮಾಡಲು ಸರ್ಕಾರದಿಂದ ಅನುದಾನವಿಲ್ಲದಿದ್ದರೆ ವೈಯಕ್ತಿಕ ಅನುದಾನ ನೀಡಿ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ರಾಜ್ಯದ ಮೀನುಗಾರಿಕೆ ಬಂದರು, ಒಳನಾಡು- ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ದೇಗುಲ ಗರ್ಭಗುಡಿ ಕುಸಿತ : ಫೇಸ್‌ಬುಕ್‌ ನಲ್ಲಿ ವಿಡಿಯೋ ವರದಿ  /  ಇನ್ಸ್ಟಾಗ್ರಾಂನಲ್ಲಿ ವಿಡಿಯೋ ವರದಿ

ತಾಲೂಕಿನ ಮಾವಿನಕುರ್ವಾದ ನವದುರ್ಗ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ವಿವಿಧ ಇಲಾಖೆಯ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಅನುದಾನ ಇಲ್ಲದಿದ್ದರೆ ಅಧಿಕಾರಿಗಳು ನನ್ನ ಗಮನಕ್ಕೆ ತನ್ನಿ. ವೈಯಕ್ತಿಕ ಅನುದಾನ ನೀಡಿ ಕೆಲಸ ಮಾಡಿಸುತ್ತೇನೆ ಎಂದರು.

ಇದನ್ನೂ ಓದಿ :ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ, ಸವಾರರಿಬ್ಬರಿಗೆ ಗಾಯ

ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜನರಲ್ಲಿ ನಮ್ಮ ಸರಕಾರ ಹೋಗಬೇಕು. ಶಾಸಕರು, ಸಚಿವರು, ಅಧಿಕಾರಿಗಳು ಸಾಮಾನ್ಯ ಜನರ ಬಳಿ ಹೋಗಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡ ಕುಸಿತ, ಸಂಚಾರಕ್ಕೆ ಅಡಚಣೆ

ಈ ಸಭೆಯಲ್ಲಿ ಬಂದಿರುವ ನಿಮ್ಮ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಕೆಲಸ ಮಾಡಿಕೊಡಲಾಗುವುದು. ಸ್ಥಳೀಯ ಅಧಿಕಾರಿಗಳಲ್ಲಿ ಆಗುವ ಕೆಲಸವನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಜೊತೆ ಇದ್ದು, ನಿಮ್ಮ ಕಷ್ಟಕ್ಕೆ ಸ್ಪಂದಿಸಬೇಕು. ನಿಮ್ಮ ಮನೆಗೆ ಹೋಗಿ ಕೆಲಸ ಮಾಡಿಕೊಡಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶ. ಅಧಿಕಾರ ಇರಲಿ ಬಿಡಲಿ, ನಿಮ್ಮ ಜೊತೆ ಇರುತ್ತೇನೆ. ಈಗಾಗಲೇ ಮಾವಿನಕುರ್ವಾ ರಸ್ತೆಗೆ ೩ ಕೋಟಿ ಮಂಜೂರಿ ಆಗಿದೆ. ಮಳೆ ಮುಗಿದ ನಂತರ ಕೆಲಸ ಪ್ರಾರಂಭ ಆಗುತ್ತದೆ. ಈ ಊರು ನಂದೇ. ಇಲ್ಲಿಯ ಅಭಿವೃದ್ಧಿ ನನಗೆ ಮುಖ್ಯ. ರಾಜಕೀಯ ಮಾಡದೆ ಬಿಜೆಪಿ-ಕಾಂಗ್ರೆಸ್ ಎನ್ನುವುದು ಬಿಟ್ಟು ಅಭಿವೃದ್ಧಿ ಮಾಡುತ್ತೇನೆ ಎಂದರು.

ಮಾವಿನಕುರ್ವಾ ಜನತೆ ಹಾಗೂ ಗ್ರಾ.ಪಂ. ವತಿಯಿಂದ ಸಚಿವ ಮಂಕಾಳ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭಟ್ಕಳ ಉಪವಿಭಾಧಿಕಾರಿ ಡಾ. ನಯನಾ ಮಾತನಾಡಿ, ಸರಕಾರದ ಯೋಜನೆಯ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬೇಕು. ಜನರು, ಅಧಿಕಾರಿಗಳು, ಜನಪ್ರತಿನಿಧಿಗಳ ನಡುವಿನ ಅಂತರ ಕಡಿಮೆ ಮಾಡುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಿರಿ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ : ಫೇಸ್‌ಬುಕ್‌ ರೀಲ್  / ಇನ್ಸ್ಟಾಗ್ರಾಂನಲ್ಲಿ ರೀಲ್

ಮಾವಿನಕುರ್ವಾ ಗ್ರಾ.ಪಂ. ಅಧ್ಯಕ್ಷ ಪೀಟರ್ ಮೆಂಡಿಸ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಗ್ರಾಮದ ಕೆಲವು ರಸ್ತೆಗಳು ಕಾಂಕ್ರಿಟ್ ರಸ್ತೆ ಆಗಬೇಕಿದೆ. ಅದಕ್ಕೆ ಅನುದಾನ ಒದಗಿಸಿ ಕೊಡಬೇಕಿದೆ. ಒಳ್ಳೆಯ ಕೆಲಸ ಮಾಡಿದರೆ ದೇವರು ಒಳ್ಳೆಯ ಅವಕಾಶ ನೀಡುತ್ತಾನೆ ಎನ್ನುವುದು ಇ ದಿನದ ಕಾರ್ಯಕ್ರಮವೇ ಸಾಕ್ಷಿ. ಗ್ರಾ.ಪಂ. ವ್ಯಾಪ್ತಿಯ ಸಮಸ್ತ ಅಭಿವೃದ್ಧಿಗೆ ಸಚಿವರ ಸಹಕಾರ ಅಗತ್ಯವಿದೆ ಎಂದರು.

ಇದನ್ನೂ ಓದಿ : ಭಟ್ಕಳ ತಾಲೂಕಿನಾದ್ಯಂತ ಎರಡ್ಮೂರು ದಿನಗಳಿಂದ ವರುಣಾರ್ಭಟ

ನೂರಾರು ಸಾರ್ವಜನಿಕರು ತಮ್ಮ ಸಮಸ್ಯೆ ಅಹವಾಲುಗಳನ್ನು ಸಲ್ಲಿಸಿದರು. ಸಚಿವರು ಅಧಿಕಾರಿಗಳ ಮೂಲಕ ಕೆಲವು ಸಮಸ್ಯೆಗಳನ್ನು ತಕ್ಷಣ ಪರಿಹಾರ ಮಾಡಿಕೊಟ್ಟರು. ಕಂದಾಯ ಇಲಾಖೆಯ ವಿವಿಧ ಪಿಂಚಣೆ ಯೋಜನೆಯ ಮಂಜೂರಾತಿ ಪತ್ರವನ್ನು ೨೨ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ನೇತ್ರ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.

ಇದನ್ನೂ ಓದಿ : ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಸಾಗರ

ವೇದಿಕೆಯಲ್ಲಿ ಡಿವೈಎಸ್ಪಿ ಮಹೇಶ, ಮಾವಿನಕುರ್ವಾ ಗ್ರಾ.ಪಂ‌ ಉಪಾಧ್ಯಕ್ಷೆ ಸವಿತಾ ನಾಯ್ಕ, ತಾಲೂಕು ದಂಡಾಧಿಕಾರಿ ರವಿರಾಜ ದೀಕ್ಷಿತ್, ಗ್ರೇಡ್ ೨ ತಹಶೀಲ್ದಾರ ಉಷಾ ಪಾವಸ್ಕರ, ತಾ.ಪಂ. ಪ್ರಭಾರಿ ಇ.ಓ. ಕೃಷ್ಣಾನಂದ ಕೆ. ಉಪಸ್ಥಿತರಿದ್ದರು.