ಭಟ್ಕಳ: ಶ್ರೀ ಸಂಸ್ಥಾನ ಕಾಶೀಮಠದ ೨೦ನೇ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಗಳ ಜನ್ಮ ಶತಾಬ್ದ ಆರಾಧನಾ ಮಹೋತ್ಸವ ಅಂಗವಾಗಿ ಜುಲೈ ತಿಂಗಳ ಆಷಾಢ ಮಾಸದ ಸ್ವಾತಿ ನಕ್ಷತ್ರದ ಜುಲೈ ೧೫ ರಂದು ಭಟ್ಕಳದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶ್ರೀ ಗುರುಗಳಿಗೆ ನಮನ ಸಲ್ಲಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶ್ರೀಗಳ ಜನ್ಮ ಶತಾಬ್ದ ಆರಾಧನಾ ಮಹೋತ್ಸವ ಸುಸಂದರ್ಭದಲ್ಲಿ ಕಾಲೇಜಿನ ಬಿಎ, ಬಿಸಿಎ, ಬಿಬಿಎ, ಬಿಕಾಂ ಕೋರ್ಸಗಳಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಲಾಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ “ಶ್ರೀ ಗುರು ಸುಧೀಂದ್ರ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ” ಅನ್ನು ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಆಡಳಿತ ಮಂಡಳಿಯವರು ಘೋಷಿಸಿದರು.

ಇದನ್ನೂ ಓದಿ : ಮಾರಿಜಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಆಡಳಿತ ಸಮಿತಿ

ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ, ಕಾಲೇಜು ನಡೆದು ಬಂದ ದಾರಿಯನ್ನು ಮೆಲಕು ಹಾಕುತ್ತಾ, ಗುರುಗಳ ಆಶೀರ್ವಾದಪೂರ್ವಕ ಸಹಕಾರವನ್ನು ಸಂಸ್ಮರಿಸಿದರು. ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ಕಾಲೇಜು ಅಭಿವೃದ್ಧಿಯನ್ನು ಕಾಣುತ್ತಿದೆ ಎಂದು ಗುರುಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಚರಂಡಿ ಬಿಟ್ಟು ರಸ್ತೆ ಮೇಲೆ ಹರಿಯುವ ನೀರು !