ಭಟ್ಕಳ : ತಾಲೂಕಿನ ಹದ್ಲೂರಿನ ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ರಂಗಮಂದಿರದಲ್ಲಿ ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಮೂರು ದಿನಗಳ ಸಮುದಾಯ ಬದುಕಿನ ಶಿಬಿರ ಆಯೋಜಿಸಿತ್ತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಭಟ್ಕಳ ತಾಲೂಕಿನ ಹದ್ಲೂರಿನ ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ರಂಗಮಂದಿರದಲ್ಲಿ ನಡೆದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಏಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಏಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ, ಸಮುದಾಯ ಬದುಕಿನ ಶಿಬಿರ ಬದುಕುವ ಶಿಕ್ಷಣ ನೀಡಲಿದೆ. ಶಿಬಿರವು ತಾಳ್ಮೆ, ಸಹನೆ, ಹೊಂದಾಣಿಕೆ, ನಾಯಕತ್ವ ಗುಣಗಳನ್ನು ಕಲಿಸುವುದರ ಜೊತೆಗೆ ಪರಿಸರದೊಂದಿಗೆ ಬದುಕಲು ಕಲಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ : ಆತ್ಮರಕ್ಷಣಾ ಕಾರ್ಯಾಗಾರ ಯಶಸ್ವಿ

ಕಾರ್ಯಕ್ರಮವನ್ನು ಊರಿನ ಹಿರಿಯ ಕೃಷ್ಣ ಮಾಸ್ತಿ ಗೊಂಡ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಹದ್ಲೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ ನಾಯ್ಕ, ಕೋಣಾರ ಗ್ರಾಮ ಪಂಚಾಯತ ಸದಸ್ಯೆ ನಾಗರತ್ನಾ ನಾಯ್ಕ,  ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ಅಧ್ಯಕ್ಷ ಗಣೇಶ ಗೊಂಡ, ಊರಿನ ಪ್ರಮುಖರಾದ ಸುಕ್ರು ಗೊಂಡ, ಸಣ್ಣು ಗೊಂಡ ಉಪಸ್ಥಿತರಿದ್ದರು.

ಇದನ್ನೂ ಓದಿ : ಮೇ ೨೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.  ಪ್ರಶಿಕ್ಷಣಾರ್ಥಿಗಳಾದ ಹೇಮಂತ ದೇವಾಡಿಗ ಸ್ವಾಗತಿಸಿದರು, ಅನುಶ್ರೀ ಮತ್ತು ದಿವ್ಯಾ ನಿರೂಪಿಸಿದರು. ನಿರ್ಮಲಾ ಮೊಗೇರ ವಂದಿಸಿದರು.

ಇದನ್ನೂ ಓದಿ : ಕನ್ನಡದ ಕಾಶ್ಮೀರ – ಉಮೇಶ ಮುಂಡಳ್ಳಿಯವರ ಅಲ್ಬಮ್ ಗೀತೆ ಬಿಡುಗಡೆ

ಪ್ರಾಂಶುಪಾಲ ಡಾ ವಿರೇಂದ್ರ ವಿ. ಶ್ಯಾನಭಾಗ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ತ ಸದಸ್ಯ ಪ್ರಕಾಶ ಶಿರಾಲಿ ಅವರನ್ನು ಭಟ್ಕಳ ತಾಲೂಕಿನ ಹದ್ಲೂರು ಗ್ರಾಮಸ್ಥರು ಸನ್ಮಾನಿಸಿದರು.

ನಂತರ ನಡೆದ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಜನಪದ ಕಲಾವಿದರಾದ ದಾಮೋದರ ಗೊಂಡರವರಿಂದ ಜನಪದ ಕಲೆಯ ಶ್ರೀಮಂತಿಕೆಯ ಪರಿಚಯ ಮತ್ತು ಪ್ರಾತ್ಯಕ್ಷಿಕೆ ಎನ್ನುವ ವಿಷಯದ ಮೇಲೆ, ಶ್ರೀ ಕೃಷ್ಣ ಮಾಸ್ತಿ ಗೊಂಡರವರಿಂದ ಗೊಂಡ ಜನಾಂಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಪರಿಚಯ ಎನ್ನುವ ವಿಷಯದ ಮೇಲೆ ಉಪನ್ಯಾಸಗಳು ನಡೆದವು.  ಯಕ್ಷಗಾನ ಕಲಾವಿದ ಪ್ರಸಾದ ಭಟ್ಕಳರವರ ಪರಿಕಲ್ಪನೆಯಲ್ಲಿ ಪ್ರಶಿಕ್ಷಣಾರ್ಥಿಗಳಿಂದ ತಾಳ ಮದ್ದಳೆಯ ಯುಗ್ಮ ಸಂವಾದ ನಡೆಯಿತು.  ಪ್ರಶಿಕ್ಷಣಾರ್ಥಿಗಳಿಂದ ಮನೋರಂಜನೆಯ ಕಾರ್ಯಕ್ರಮ, ಹದ್ಲೂರಿನ ಶ್ರೀ ದುರ್ಗಾ ಪರಮೇಶ್ವರಿ ಗಿರಿಜನ ಯುವಕ ಸಂಘದ ಸದಸ್ಯರಿಂದ ಜನಪದ ಕಲಾ ವೈಭವ ಮತ್ತು ರಾಮಚಂದ್ರ ನಾಯ್ಕ ತಂಡದಿಂದ ಭಜನಾ ಕುಣಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಾಂಶುಪಾಲ ಡಾ ವಿರೇಂದ್ರ ವಿ. ಶ್ಯಾನಭಾಗ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ತ ಸದಸ್ಯ ಪ್ರಕಾಶ ಶಿರಾಲಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಇದನ್ನೂ ಓದಿ : ಉಚಿತ ನೇತ್ರ ತಪಾಸಣಾ ಶಿಬಿರ ಸಂಪನ್ನ