ಬೆಳಗಾವಿ: ಬರಗಾಲದ ನಡುವೆಯೂ ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ಕಾಣಿಕೆ ಸಂಗ್ರಹಕ್ಕೇನು ಕಡಿಮೆಯಾಗಿಲ್ಲ. ಬರೋಬ್ಬರಿ 11 ಕೋಟಿ ಕಾಣಿಗೆ ಹುಂಡಿಯಲ್ಲಿ ಸಂಗ್ರಹವಾಗಿದೆ.
ಇದನ್ನೂ ಓದಿ : ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ : ಪ್ರಯಾಣಿಕ ಸೆರೆ
ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಿ ದೇವಾಲಯವೂ ಒಂದಾಗಿದೆ. ರಾಜ್ಯ ಸೇರಿದಂತೆ, ಹೊರ ರಾಜ್ಯಗಳಿಂದಲೂ ಸಾವಿರಾರೂ ಭಕ್ತರು ಸವದತ್ತಿ ಯಲ್ಲಮ್ಮ ದೇವಿ ದೇವಾಲಯಕ್ಕೆ ಆಗಮಿಸಿ, ದರ್ಶನ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಬರಗಾಲದ ಮಧ್ಯೆಯೂ ಸವದತ್ತಿಯ ಯಲ್ಲಮ್ಮ ದೇವಿ ದೇವಾಲಯದ ಹುಂಡಿಯಲ್ಲಿ 2023-24ನೇ ಸಾಲಿನಲ್ಲಿ ಬರೋಬ್ಬರಿ 11.23 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಈ ಮೂಲಕ ಭಕ್ತರು ನಗದು, ಚಿನ್ನ, ಬೆಳ್ಳಿಯ ಆಭರಣಗಳನ್ನು ಹಾಕಿ ಭಕ್ತಿಯನ್ನು ಮೆರೆದಿದ್ದಾರೆ.
ಈ ರೀಲ್ಸ್ ನೋಡಿ : ಈಶ್ವರಪ್ಪಗೆ ಬಿ ವೈ ರಾಘವೇಂದ್ರ ಸವಾಲು
ಅಂದಹಾಗೆ, 2022-23ನೇ ಸಾಲಿನಲ್ಲಿ 8.01 ಕೋಟಿ ರೂ ನಗದು, 66.28 ಲಕ್ಷ ಮೌಲ್ಯದ ಚಿನ್ನ, 15.43 ಲಕ್ಷ ರೂ ಮೌಲ್ಯದ ಬೆಳ್ಳಿಯ ಆಭರಣ ಸೇರಿದಂತೆ 8.83 ಕೋಟಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿತ್ತು. ಅದೇ ಈ ಬಾರಿ 11.23 ಕೋಟಿಯಾಗಿದ್ದು, ಕಳೆದ ಬಾರಿಗಿಂತ 2.4 ಕೋಟಿ ಹೆಚ್ಚಿನ ಆದಾಯ ಯಲ್ಲಮ್ಮ ದೇವಿ ದೇವಾಲಯದಲ್ಲಿ ಸಂಗ್ರಹವಾಗಿದೆ.