ಭಟ್ಕಳ: ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಶ್ರೀ ನಾಗಮಾಸ್ತಿ ದೇವರ ಸನ್ನಿಧಾನದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ಶ್ರದ್ದಾ ಭಕ್ತಿಯಿಂದ ನಡೆಯಿತು.
ವಿಡಿಯೋ ನೋಡಿ : https://fb.watch/qngZKcwFMN/?mibextid=Nif5oz
ಗುರುವಾರ ಬೆಳಿಗ್ಗೆ ಶ್ರೀ ನಾಗಯಕ್ಷೆ ಸಂಸ್ಥಾನದಿಂದ ಶ್ರೀ ದೇವಿಯ ಬೆಳ್ಳಿಯ ಕವಚ ಸಮರ್ಪಣೆ ಮಾಡಿಸಲಾಯಿತು. ಬಳಿಕ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಸ್ಥಾನಶುದ್ದಿ, ಬಿಂಬಶುದ್ದಿ, ಅಧಿವಾಸ ಪ್ರತಿಷ್ಠೆ, ಕಲಾಹೋಮ, ಕುಂಬಾಭಿಷೇಕ, ಮಹಾಪೂಜೆ, ಬ್ರಾಹ್ಮಣ ಆರಾಧನೆ ನಡೆಯಿತು. ಸುವಿಧ ಮಹಿಳಾ ಮಂಡಳಿ, ಮುಟ್ಟಳ್ಳಿ, ಮೂಡಭಟ್ಕಳ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆಗೆ ಚಾಲನೆ
ಮಧ್ಯಾಹ್ನ 12.30ರ ಸುಮಾರಿಗೆ ಮಹಾಪೂಜೆ, ಬಳಿಕ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮುಟ್ಟಳ್ಳಿ , ಮಣ್ಕುಳಿ , ತಲಾಂದ ಹಾಗೂ ಅಕ್ಕ ಪಕ್ಕದ ಊರಿನ ಭಕ್ತರು ಪಾಲ್ಗೊಂಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.