ಭಟ್ಕಳ : ಸಾಕು ನಾಯಿ ಅಂದ್ರೆ ಎಲ್ಲರಿಗೂ ಮುದ್ದಿನ ಪ್ರಾಣಿ. ಅದರ ಒಡನಾಟ, ಪ್ರೀತಿ, ಎಲ್ಲರೊಂದಿಗೆ ಬೆರೆಯುವ ಗುಣದಿಂದ ಕುಟುಂಬ ಸದಸ್ಯರಲ್ಲಿ ತಾನು ಕೂಡ ಓರ್ವ ಸದಸ್ಯನಾಗಿ ಬದುಕುತ್ತೆ. ಮನೆ ಮಂದಿಗೆಲ್ಲಾ ಆ ಮೂಕ ಪ್ರಾಣಿ ತೋರಿಸುವ ಪ್ರೀತಿ ಅಪಾರ. ಆದರೆ, ಮುದ್ದಿನ ನಾಯಿಯನ್ನ ಕಳೆದುಕೊಂಡರೆ ಆಗುವ ದುಃಖ ನೋವು ಅಷ್ಟಿಷ್ಟಲ್ಲ. ಇಂಥದ್ದೊಂದು ಘಟನೆ ತಾಲೂಕಿನ ಬೇಲೂರಿನಲ್ಲಿ ನಡೆದಿದೆ. ಕುಟುಂಬದ ಸದಸ್ಯನಂತಿದ್ದ ಮೃತ ಸಾಕು ನಾಯಿಗೆ ವಿಧಿವತ್ತಾಗಿ ವೈದ್ಯ ಕುಟುಂಬ ಅಂತ್ಯಸಂಸ್ಕಾರ ನೆರವೇರಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬೈಲೂರಿನ ವೈದ್ಯರ ಮನೆಯ ಅಚ್ಚುತ್ ವೈದ್ಯರು ಕಳೆದ ಹನ್ನೊಂದು ವರ್ಷದ ಹಿಂದೆ ಲ್ಯಾಬ್ ಜಾತಿಯ ನಾಯಿಮರಿ ತಂದು ಬಂಟಿ ಅಂತ ಹೆಸರಿಟ್ಟು ಸಾಕಿದ್ದರು. ಹೆಸರಿಗೆ ತಕ್ಕಂತೆ ಬಂಟಿ ನೋಡಲು ಮುದ್ದು ಮುದ್ದಾಗಿತ್ತು. ಹನ್ನೊಂದು ವರ್ಷದಿಂದ ಕುಟುಂಬದೊಂದಿಗೆ ಬೆರೆತಿತ್ತು. ಬಂಧು-ಬಳಗ ಮನೆಗೆ ಬಂದ್ರೆ ಅವರನ್ನ ಗುರುತಿಸಿ ಪ್ರೀತಿ ತೋರಿಸುತ್ತಿತ್ತು. ಮನೆಯವರು ಹೊರಗೆ ಹೊರಟರೆ ಮಕ್ಕಳಂತೆ ಬೆನ್ನು ಹತ್ತುತ್ತಿತ್ತು. ಬೈಕ್ ಮೇಲೆ ಕುಳಿತು ಎಲ್ಲೆಂದರಲ್ಲಿ ಸುತ್ತಾಡುತ್ತಿತ್ತು. ಮನೆಯಿಂದ ಕೆಲಸದ ನಿಮಿತ್ತ ಮನೆ ಸದಸ್ಯರು ಹೊರ ಹೋಗಿ ಬರುವ ತನಕ ದಾರಿಯನ್ನೇ ಕಾಯುತಿತ್ತು. ಒಂದೇ ಮಾತಿನಲ್ಲಿ ಹೇಳುವುದಾದ್ರೆ ಹನ್ನೊಂದು ವರ್ಷದಿಂದ ಬಂಟಿ ಆ ಕುಟುಂಬದ ಅಚ್ಚುಮೆಚ್ಚಿನ ಸದಸ್ಯನಾಗಿತ್ತು. ಸಾಕು ನಾಯಿಗೆ ಪ್ರತ್ಯೇಕವಾಗಿ ವಾಸವಾಗಿರಲು ಸಣ್ಣ ಕೊಠಡಿ ರೀತಿ ನಿರ್ಮಿಸಿ ಬೇಸಿಗೆ ಕಾಲದಲ್ಲಿ ಫ್ಯಾನ್ ಕೂಡ ಅಳವಡಿಸಿಕೊಟ್ಟಿದ್ದರು.
ಇದನ್ನೂ ಓದಿ : ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ
ಮನೆಯ ಮಗನಗಿಂತ ಹೆಚ್ಚಾಗಿದ್ದ ಬಂಟಿ ಇದೀಗ ಕ್ಯಾನ್ಸರಿನಿಂದ ಜೂನ್ ೪ರಂದು ಸಾವನ್ನಪ್ಪಿದೆ. ಬಂಟಿ ಸಾವು ಕುಟುಂಬಸ್ಥರ ಕಣ್ಣೀರ ಕೋಡಿ ಒಡೆಯುವಂತೆ ಮಾಡಿದೆ. ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಮೃತ ಬಂಟಿ ದೇಹದ ಮುಂದೆ ಕುಳಿತ ಹಿರಿಯರು, ಮಕ್ಕಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಗಲಿದ ಪ್ರೀತಿಯ ಬಂಟಿಯ ಅಂತ್ಯಸಂಸ್ಕಾರ ಮನುಕುಲದ ಮಾದರಿಯಲ್ಲಿ ವಿಧಿ ವಿಧಾನದೊಂದಿಗೆ ನೆರವೇರಿಸಲಾಗಿದೆ. ಮನೆಮಂದಿಯೆಲ್ಲಾ ಸೇರಿಕೊಂಡು ಭಾವುಕರಾಗಿ ಅಂತಿಮ ವಿದಾಯ ಹೇಳಿದ್ದಾರೆ. ಅದೇ ರೀತಿ ಇಂದು ಸೋಮವಾರ ೧೪ ದಿನದ ಕಾರ್ಯ ನೆರವೇರಿಸಿದ್ದಾರೆ.