ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವಿಸುತ್ತಿದ್ದವನನ್ನು ಹಿಡಿದು ಪೊಲೀಸರು ಆತನ ನಶೆ ಇಳಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕೂಲಿ ಕೆಲಸ ಮಾಡುವ ಗುಡಿಹಿತ್ಲು ನಿವಾಸಿ ಜೀವನ ನಾಯ್ಕ(೩೬) ಮದ್ಯ ವ್ಯಸನಿ. ಈತ ಶಿರಾಲಿಯ ಶ್ರೀಕೃಷ್ಣಪ್ರಸಾದ ಹೋಟೆಲ್ ಎದುರು ಮದ್ಯ ಸೇವಿಸುತ್ತಿದ್ದಾಗ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಕೆಲಸ ಮುಗಿದ ಸಂಜೆ ಮನೆಗೆ ಮರಳಿರಲಿಲ್ಲ. ಜುಲೈ ೬ರಂದು ರಾತ್ರಿ ೯ ಗಂಟೆಗೆ ಹೋಟೆಲ್ ಎದುರು ಸಾರಾಯಿ ಕುಡಿಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪಿಎಸ್ ಐ ರನ್ನಗೌಡ ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಕಾಲು ಜಾರಿ ಬಿದ್ದು ಕೃಷಿಕ ಸಾವು