ಭಟ್ಕಳ : ತಾಲೂಕಿನ ಹೆಬಳೆ ಹೆರ್ತಾರ ನಿವಾಸಿ ಕಲ್ಪನಾ ಮಾಸ್ತಿ ಮೊಗೇರ ಮೇ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟಂಟ್ (ಸಿ.ಎ.)ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೂಲತಃ ಮುಂಡಳ್ಳಿ ಮೊಗೇರಕೇರಿಯವರಾದ ಇವರು ಸೀತಾ ಮತ್ತು ಮೀನುಗಾರ ಮಾಸ್ತಿ ಮೊಗೇರ ದಂಪತಿ ಪುತ್ರಿ. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಇವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದಿದ್ದಾರೆ. ೨೦೨೨ರಲ್ಲಿ ಗ್ರೂಪ್ ೧ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಗ್ರೂಪ್ ೨ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಸುಧೀಂದ್ರ ಕಾಲೇಜು ತೃತೀಯ