ಭಟ್ಕಳ: ಪತ್ರಿಕಾ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಬ್ಯಾಂಕ್ ನೌಕರ ಹಾಗೂ ಹಿರಿಯ ಸಮಾಜ ಸೇವಕ ಎಸ್.ಎಸ್. ಕಾಮತ ಅವರನ್ನು ಅವರ ಮನೆಯಲ್ಲಿಯೇ ಗೌರವಿಸಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಸನ್ಮಾನ ಮತ್ತು ಗೌರವ ಸ್ವೀಕರಿಸಿ ಮಾತನಾಡಿದ ಎಸ್.ಎಸ್.ಕಾಮತ, ತಮ್ಮ ಸಮಾಜ ಸೇವೆಯ ಗುಣ ಬಾಲ್ಯದಿಂದಲೂ ಇದ್ದು ವಿದ್ಯಾಭ್ಯಾಸದ ದಿನಗಳಲ್ಲಿನ ಕಷ್ಟದ ಪರಿಸ್ಥಿತಿಯಲ್ಲಿಯೂ ತಮ್ಮ ಸ್ಪಂಧನೆಯನ್ನು ಸ್ಮರಿಸಿದರು. ತಮ್ಮ ಸಹೋದರಿ ಚಂದ್ರಕಲಾ ಕಾಮತ ಹಾಗೂ ಪತ್ನಿ ಆಶಾ ಕಾಮತ ಅವರ ಸಹಕಾರದಿಂದ ನಿವೃತ್ತಿಯ ನಂತರ ದೊಡ್ಡ ಮೊತ್ತವನ್ನು ಠೇವಣಿಯಾಗಿಟ್ಟಿದ್ದೇನೆ. ಅದರ ಬಡ್ಡಿಯನ್ನು ಸಮಾಜ ಸೇವೆಗಾಗಿಯೇ ಮೀಸಲಿಡಲಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ತೃಪ್ತಿ ಇದೆ. ಊರಿನ ಆಗುಹೋಗುಗಳ ಕುರಿತು ಕಾಳಜಿ ವಹಿಸಬೇಕಾಗಿರುವುದು ನಮ್ಮ ಕರ್ತವ್ಯ. ಪ್ರತಿಯೊಂದು ಹಂತದಲ್ಲಿಯೂ ಸಹ ಪತ್ರಕರ್ತರ ಸಹಕಾರ ಸ್ಮರಣೀಯವಾದದ್ದು ಎಂದರು. ನಂತರ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಿದರು.

ಇದನ್ನೂ ಓದಿ : ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಮಾತನಾಡಿ, ಸಂಘದ ವತಿಯಿಂದ ಪ್ರತಿ ವರ್ಷ ಪತ್ರಿಕಾ ದಿನಾಚರಣೆಯಂದು ಸಮಾಜಮುಖಿ ವ್ಯಕ್ತಿಯೋರ್ವರನ್ನು ಗೌರವಿಸುವ ಪರಿಪಾಠ ಹಾಕಿಕೊಳ್ಳಲಾಗಿದೆ. ಅದರಂತೆ ಸಂಘದ ಎಲ್ಲಾ ಸದಸ್ಯರು ಹಿರಿಯ ಸಮಾಜ ಸೇವಕ ಎಸ್.ಎಸ್.ಕಾಮತ್ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಕ್ಕೆ ಆಯ್ಕೆ ಮಾಡಿದ್ದೇವೆ. ಸಮಾಜ ಸೇವೆಯಲ್ಲಿ ಇತರರಿಗೆ ಮಾದರಿಯಾದ ಇವರ ಬದುಕು ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.

ಇದನ್ನೂ ಓದಿ : ಸ್ಪೋರ್ಟ್ಸ್ ಕರಾಟೆ ರೆಫ್ರಿ ತರಬೇತಿ ಉದ್ಘಾಟನೆ

ಹಿರಿಯ ಲಯನ್ಸ್ ಸದಸ್ಯ ಎಂ.ವಿ. ಹೆಗಡೆ ಮಾತನಾಡಿ, ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಇತರ ಯಾವುದೇ ಮಾಧ್ಯಮ ಬಂದರೂ ಇಂದಿಗೂ ಪತ್ರಿಕೆಗಳು ತಮ್ಮತನವನ್ನು ಉಳಿಸಿಕೊಂಡಿರುವುದನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಸಾಹಿತಿ ಶಂಭು ಹೆಗಡೆ ಮಾತನಾಡಿದರು.

ಇದನ್ನೂ ಓದಿ : ಶಿಖರ ಕಲಶ ಪ್ರತಿಷ್ಠಾಪನೆ ನೆರವೇರಿಸಿದ ಪರ್ತಗಾಳಿ ಶ್ರೀಗಳು

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ತಾಲೂಕು ಕಾರ್ಯದರ್ಶಿ ಶೈಲೇಶ ವೈದ್ಯ, ಸತೀಶಕುಮಾರ್ ಉಪಸ್ಥಿತರಿದ್ದರು. ಕಾ.ನಿ.ಪತ್ರಕರ್ತರ ಸಂಘದ ತಾಲೂಕು ಉಪಾಧ್ಯಕ್ಷ ಮೋಹನ ನಾಯ್ಕ ಸ್ವಾಗತಿಸಿ, ನಿರೂಪಿಸಿದರು. ತಾಲೂಕು ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ವಂದಿಸಿದರು.