ಜೋಯಿಡಾ : ಕೇವಲ‌ ೪ ದಿನಗಳ ಅಂತರದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಯುವತಿಯರು ನಾಪತ್ತೆಯಾಗಿದ್ದಾರೆ. ಇಬ್ಬರೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದವರು ಎಂಬುದು ಗಮನಾರ್ಹ.

ಇದನ್ನೂ ಓದಿ : ಬಿಜೆಪಿಗೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿದ್ದಾರೆ: ಡಿ.ಕೆ. ಶಿವಕುಮಾರ್

ರಾಮನಗರದ ವಡ್ಡರ ಕಾಲೋನಿ‌ ನಿವಾಸಿ ಅಂಜಲಿ ಭೀಮಶಿ ಭೋವಿವಡ್ಡರ (೧೭ ವರ್ಷ ೬ ತಿಂಗಳು) ಮಾ.೧೫ರಂದು ಬೆಳಗ್ಗೆ ೮ ಗಂಟೆಗೆ ರಾಮನಗರದ ಮಾರ್ಕೆಟ್‌ಗೆ ಹೋಗಿದ್ದಳು. ಪ್ಯಾಂಟ್ ಹೊಲೆದುಕೊಂಡು ಸರಿ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ.
ಇದಾದ ೪ ದಿನಗಳ ಅಂತರದಲ್ಲಿ ರಾಮನಗರದ ಕೃಷ್ಣಾಗಲ್ಲಿ ನಿವಾಸಿ ಸುರೇಖಾ(೧೬ ವರ್ಷ ೮ ತಿಂಗಳು) ನಾಪತ್ತೆಯಾಗಿದ್ದಾಳೆ. ಮಾ.೧೯ ರಾತ್ರಿ ೯ ಗಂಟೆಗೆ ತನ್ನ ಗೆಳತಿಯರ ಜೊತೆ ರಾಮಲಿಂಗೇಶ್ವರ ದೇವರ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ.

ಈ ರೀಲ್ಸ್ ನೋಡಿ : ಭಟ್ಕಳದಲ್ಲಿ ನಡೆದ ಬಸ್-ಆಟೋ ಅಪಘಾತದ ದೃಶ್ಯ

ಅಂಜಲಿ ಚಹರೆ:

ಗೋಧಿ ಮೈ ಬಣ್ಣ, 4.10 ಅಡಿ ಎತ್ತರ, ಬಿಳಿ ಬಣ್ಣದ ಚೂಡಿದಾರ ಟಾಫ್ ಹಾಗೂ ಕಪ್ಪು ಬಣ್ಣದ ಚೂಡಿದಾರ ಪ್ಯಾಂಟ್ ಧರಿಸಿದ್ದಾಳೆ. ಕನ್ನಡ, ಮರಾಠಿ, ಹಿಂದಿ, ತೆಲಗು ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾಳೆ.

ಸುರೇಖಾ ಚಹರೆ:

ಗೋಧಿ ಮೈ ಬಣ್ಣ, 4.10 ಅಡಿ ಎತ್ತರ, ಕಪ್ಪು ಬಣ್ಣದ ಟಿ ಶರ್ಟ್ ಹಾಗೂ ಬೂದು ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದಾಳೆ. ಕನ್ನಡ, ಮರಾಠಿ, ಹಿಂದಿ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಾಳೆ.
ಇವರಿಬ್ಬರ ಪತ್ತೆಗೆ ಸಹಕರಿಸುವಂತೆ ರಾಮನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಕೋರಿದ್ದಾರೆ.