ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಗೋಡಾಮಕ್ಕಿಯ ವಿಶ್ವನಾಥ ಭಟ್ ಇವರ ತೋಟದಲ್ಲಿಯ ಇಂಟರ್ ಸಿ ತಳಿಯ ೫೦ಕ್ಕೂ ಅಧಿಕ ಅಡಿಕೆ ಸಸಿಗಳು ಹಂದಿ ಕಾಟದಿಂದ ಹಾನಿಯಾಗಿವೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿದೆ. ಕಾಡುಹಂದಿ ಹಾಗೂ ಮಂಗನ ಕಾಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಹರಸಹಸ ಪಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸುವ ಕಾಡುಹಂದಿ ರೈತರು ಬೆಳೆಸಿದ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ಮುರಿದು ಹಾಕುವುದರಿಂದ ಸಂಕಷ್ಠ ಅನುಭವಿಸುವಂತಾಗಿದೆ. ಇಂಟರ್ ಸಿ ತಳಿಯ ಅಡಿಕೆ ಸಸಿಗಳನ್ನು ಹಣ ನೀಡಿ ಬೇರೆಡೆಯಿಂದ ತಂದು ನಾಲ್ಕು ವರ್ಷದಿಂದ ಗೊಬ್ಬರ ನೀರು ಹಾಕಿ ಬೆಳೆಸಲಾಗಿತ್ತು. ೫೦ಕ್ಕೂ ಅಧಿಕ ಅಡಿಕೆ ತಳಿಗಳು ಹಂದಿ ಕಾಟದಿಂದ ಹಾನಿಗೊಳಗಾಗಿವೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ವಿಶ್ವನಾಥ ಭಟ್ಟ ತಿಳಿಸಿದ್ದಾರೆ.

ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ವಿತರಣೆ

ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡು ರೈತರು ಬೆಳೆದ ಬೆಳೆಗೆ ಆದ ಹಾನಿಗೆ ಪರಿಹಾರ ಒದಗಿಸಿ ನೆರವಾಗಬೇಕಿದೆ.