ಭಟ್ಕಳ: ೭ ತಿಂಗಳ ಮಗು ಅಪಹರಣವಾಗಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮಗುವಿನ ತಂದೆ, ದಾಂಡೇಲಿಯ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

೮ ತಿಂಗಳ ಹಿಂದೆ ತನ್ನ ಹೆಂಡತಿಯ ತಾಯಿಯ ಅಂತ್ಯ ಸಂಸ್ಕಾರಕ್ಕೆ ದಾಂಡೇಲಿಗೆ ಭಟ್ಕಳ ಮೂವರು ಬಂದಿದ್ದರು. ಪರಿಚಯ ಮಾಡಿಕೊಂಡ ಭಟ್ಕಳ ಮೂಲದ ಓರ್ವ ಗಂಡಸು ಹಾಗೂ ಇಬ್ಬರು ಹೆಂಗಸು ನಮ್ಮನು್ನು ದಾಂಡೇಲಿಯಿಂದ ಭಟ್ಕಳಕ್ಕೆ ಕರೆಸಿಕೊಂಡಿದ್ದರು. ಆ ಸಂದರ್ಭ ನಮ್ಮ ೭ ತಿಂಗಳ ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ಮಗುವಿನ ತಂದೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ವಿದ್ಯಾಂಜಲಿ ಮುಕುಟಕ್ಕೆ ರಾಷ್ಟ್ರ ಪ್ರಶಸ್ತಿಯ ಕಿರೀಟ

ದಾಂಡೇಲಿ ಮೂಲದ ಹುಸೇನಸಾಬ್ ಎನ್ನುವವರು ಪ್ರಕರಣ ದಾಖಲಿಸಿದವರು. ೮ ತಿಂಗಳ ಹಿಂದೆ ತನ್ನ ಹೆಂಡತಿ ತಾಯಿ ಮೃತಪಟ್ಟಾಗ ಭಟ್ಕಳ ಮೂಲದ ಓರ್ವ ಗಂಡಸು ಹಾಗೂ ಓರ್ವ ಹೆಂಗಸು ಅಂತ್ಯ ಸಂಸ್ಕಾರಕ್ಕೆ ಬಂದಿದ್ದರು. ತಮ್ಮನ್ನು ಪರಿಚಯ ಮಾಡಿಕೊಂಡು. ನಮಗೆ ಸಾಂತ್ವನ ಹೇಳಿ ಅವರ ಮೊಬೈಲ್ ನಂಬರ್ ನೀಡಿ ಹೋಗಿದ್ದರು. ಬಳಿಕ ನಮಗೆ ಕರೆ ಮಾಡಿ ಒಂದು ದಿನ ಭಟ್ಕಳಕ್ಕೆ ಬಂದು ಹೋಗುವಂತೆ ಒತ್ತಾಯ ಮಾಡುತ್ತಿದ್ದರು. ಕಾರಣ ನಾವು ಜೂನ್ ೧೮ ರ ಸಂಜೆ ೬ ಗಂಟೆಗೆ ದಾಂಡೇಲಿಯಿಂದ ಹೊರಟು ರಾತ್ರಿ ೧೦ ಗಂಟೆಗೆ ಭಟ್ಕಳಕ್ಕೆ ಬಂದಿದ್ದೇವು. ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಆಲ್ ಖಲೀಜ್ ಹೋಟೆಲ್ ಬಳಿ ಬಂದು ಮೊಬೈಲ್ ಗೆ ಕರೆ ಮಾಡಿದಾಗ ಅಂತ್ಯ ಸಂಸ್ಕಾರಕ್ಕೆ ಬಂದ ಓರ್ವ ಗಂಡಸು ಹಾಗೂ ಓರ್ವ ಹೆಂಗಸಿನೊಂದಿಗೆ ಇನ್ನೋರ್ವ್ ಹೆಂಗಸು ಒಟ್ಟು ಮೂವರು ಬಂದು ನಮ್ಮನ್ನು ಮಾತನಾಡಿಸಿದ್ದರು. ನನ್ನ ಹೆಂಡತಿ ಬಳಿ ಇದ್ದ ೭ ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ, ನೀವು ಎಲ್ಲಿಯೇ ಇರಿ ಎಂದು ಹೋಗಿದ್ದರು. ಜೂನ್ ೨೦ರಂದು ಅವರಿಗೆ ಕರೆ ಮಾಡಿದಾಗ ತಾವೇ ಮಗುವನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿ, ನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಜೂನ್ ೨೧ರ ಮಧ್ಯಾಹ್ನ ೩.೩೦ಕ್ಕೆ ನಮ್ಮ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೋರಿಸಿ ಮಗು ಆರಾಮವಾಗಿ ಇದೆ. ಚಿಂತೆ ಬೇಡ, ನಿಮ್ಮ ಮಗುವನ್ನು ತಂದು ಕೊಡುತ್ತೇವೆ ಎಂದು ಹೇಳಿ ಪುನಃ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಮಗುವಿನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.