ಭಟ್ಕಳ : ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಸರ್ಪನಕಟ್ಟೆಯ ಯಲ್ವಡಿಕವೂರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋರಿಕಲ್ಲ ಮನೆಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮೃತರನ್ನು ಕೃಷ್ಣಮ್ಮ ನಾರಾಯಣ ನಾಯ್ಕ ( 55) ಮತ್ತು ಅವರ ಮಗಳು ಮಾದೇವಿ ದೊಡ್ಡಯ್ಯ ನಾಯ್ಕ (37) ಎಂದು ಗುರುತಿಸಲಾಗಿದೆ. ಮಾದೇವಿ ದೊಡ್ಡಯ್ಯ ನಾಯ್ಕ ಅವರಿಗೆ ಕಳೆದ ೧೪ ವರ್ಷದ ಹಿಂದೆ ಮದುವೆಯಾಗಿತ್ತು. ಕಳೆದ ೧೨ ವರ್ಷಗಳಿಂದ ತನ್ನ ತಾಯಿ ಮನೆಯ ಸಮೀಪದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಇವರಿಗೆ ೮ನೇ ತರಗತಿ ಓದುತ್ತಿರುವ ಮಗಳು ಹಾಗೂ ೫ನೇ ತರಗತಿ ಓದುತ್ತಿರುವ ಓರ್ವ ಮಗನಿದ್ದಾನೆ. ಇಂದು ಸಂಬಂಧಿಕರ ಮದುವೆ ಇದ್ದ ಕಾರಣ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾದೇವಿ ನೇಣಿಗೆ ಶರಣಾಗಿದ್ದಾರೆ. ಇದನ್ನು ನೋಡಿದ ತಾಯಿ ಕೂಡ ಅಲ್ಲೇ ಸಮೀಪವಿದ್ದ ತಮ್ಮ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಡೆದಿದೆ.
ಇದನ್ನೂ ಓದಿ : ಮಳೆ ಆರ್ಭಟ ಮುಂದುವರಿಕೆ, ಹಲವೆಡೆ ಹಾನಿ
ಡೆತ್ ನೋಟ್ ಪತ್ತೆ :
ಮಾದೇವಿ ಡೆತ್ ನೋಟ್ ಬರೆದಿಟ್ಟಿದ್ದು ಅವರ ಮನೆಯಲ್ಲಿ ಪತ್ತೆಯಾಗಿದೆ. ತನ್ನ ಸಾವಿಗೆ ಯಾರೂ ಕಾರಣರಲ್ಲ. ತನ್ನ ಶವವನ್ನು ತಾಯಿ ಮತ್ತು ಸಹೋದರ ನೋಡಬಾರದು ಎಂದು ಬರೆದಿದ್ದಳು. ಆದರೆ ದುರ್ದೈವ, ಮಗಳ ಶವ ನೋಡಿದ ತಾಯಿಯೂ ಅದೇ ಹಾದಿ ಹಿಡಿದಿದ್ದಾಳೆ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.



