ಭಟ್ಕಳ: ಉ.ಕ. ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಅಂಜುಮನ್ ಹಾಮಿ ಎ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗೆ ರವಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ೩೫ ವರ್ಷಕ್ಕೂ ಅಧಿಕ ಕಾಲ ಅಂಜುಮನ್ ಸದಸ್ಯರಾಗಿರುವ ಉದ್ಯಮಿ ಮುಹಮ್ಮದ್ ಯುನೂಸ್ ಖಾಝಿಯಾ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಇಸ್ಲಾಖ್ ಶಾಬಂದ್ರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಆಫ್ಲಾಬ್ ಖಮರಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಸಮುದ್ರದಲ್ಲಿ ಕೃತಕ ಬಂಡೆಸಾಲುಗಳ ಅಳವಡಿಕೆಗೆ ಚಾಲನೆ
ದಮ್ಮಾಮ್ (ಸೌದಿ ಅರೇಬಿಯಾ)ನ ಖ್ಯಾತ ಉದ್ಯಮಿ ಮತ್ತು ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್ನ ಸಕ್ರಿಯ ಸದಸ್ಯ, ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸಮುದಾಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯೂನಸ್ ಖಾಜಿಯಾ ಅವರು ಪ್ರಥಮ ಬಾರಿಗೆ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಗೊಂಡರು. ಇವರು ಕೆನರಾ ಮುಸ್ಲಿಂ ಗಲ್ಫ್ ಕೌನ್ಸಿಲ್ನ ಅಧ್ಯಕ್ಷ ಹುದ್ದೆ ಹೊಂದಿದ್ದಾರೆ. ಸೌದಿ ಅರೇಬಿಯಾದಲ್ಲಿ ಭಟ್ಕಳ ಮುಸ್ಲಿಂ ಜಮಾತ್ ಅಲ್-ಶರ್ಕಿಯಾದ ಮೊದಲ ಅಧ್ಯಕ್ಷ ಎಂಬ ಕೀರ್ತಿ ಇವರದ್ದಾಗಿದೆ. ಭಟ್ಕಳದ ತಂಝೀಮ್ ಸಂಸ್ಥೆಯಲ್ಲೂ ಇವರು ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಬ್ದುಲ್ ವಾಜಿದ್ ಕೋಲಾ ಅವರ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆಯಲ್ಲಿ ೮೦ ಸದಸ್ಯರು ಭಾಗವಹಿಸಿದ್ದರು.
ಈ ವಿಡಿಯೋ ನೋಡಿ : ಸಮುದ್ರದಲ್ಲಿ ಸಚಿವ ಮಂಕಾಳ ವೈದ್ಯ ಶವಾಶನ https://www.facebook.com/share/p/sdZzJou5pKugz4HV/?mibextid=Nif5oz
ಇನ್ನಿತರ ಪದಾಧಿಕಾರಿಗಳ ವಿವರ:
ಉಪಾಧ್ಯಕ್ಷರು (೧ನೇ)- ಮುಹಮ್ಮದ್ ಸಾದಿಕ್ ಪಿಲ್ಲೂರ್, ಉಪಾಧ್ಯಕ್ಷ (೨ನೇ) ಡಾ. ಜುಬೇರ್ ಕೋಲಾ, ಕಾಮಗಾರಿ ಸಮಿತಿ ಕಾರ್ಯದರ್ಶಿ- ಎಸ್.ಜೆ.ಸೈಯದ್ ಹಾಶಿಮ್, ಹಣಕಾಸು ಕಾರ್ಯದರ್ಶಿ- ಎಸ್ ಎಂ ಸೈಯದ್ ಪರ್ವೇಜ್, AITM ಮಂಡಳಿಯ ಕಾರ್ಯದರ್ಶಿ- ಮೊಹಿಯುದ್ದೀನ್ ರುಕ್ಷುದ್ದೀನ್, BBA BCA ಪ್ರೊಫೆಷನಲ್ ಕಾಲೇಜ್ ಬೋರ್ಡ್ ಕಾರ್ಯದರ್ಶಿ – ಅಹಿದ್ ಮೊಹತೆಶಮ್, ಪಿಯು & ಪದವಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ- ಡಾ. ಎಸ್.ಎಂ.ಸೈಯದ್ ಸಲೀಂ, ಪ್ರೌಢಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ- ಸಾದುಲ್ಲಾ ರುಕ್ಷುದ್ದೀನ್, ಪ್ರಾಥಮಿಕ ಮಂಡಳಿ ಕಾರ್ಯದರ್ಶಿ- ತಸ್ವೀರ್ ಕಾಸರಕೋಡ್, ದೀನಿಯಾತ್ ಬೋರ್ಡ(ಧಾರ್ಮಿಕ ಶಿಕ್ಷಣ) ಕಾರ್ಯದರ್ಶಿ- ಮೌಲಾನಾ ಡಾ. ಅಬ್ದುಲ್ ಹಮೀದ್ ಅಥರ್ ರುಕ್ನುದ್ದೀನ್ ನದ್ವಿ.