ಭಟ್ಕಳ: ಇಂದು ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ. ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಅದೇ ರೀತಿ ಭಟ್ಕಳ ಬಸ್ ನಿಲ್ದಾಣ ಪಕ್ಕದಲ್ಲಿ ದಿ. ಡಾ. ಪುನೀತ್ ರಾಜಕುಮಾರ ಜನ್ಮದಿನದ ಪ್ರಯುಕ್ತ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ ಭಟ್ಕಳ ವತಿಯಿಂದ ಸಾರ್ವಜನಿಕರಿಗೆ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.

ವಿಡಿಯೋ ವರದಿ ನೋಡಿ :  https://www.facebook.com/share/v/GdnZBFDjMoB5JZQp/?mibextid=oFDknk

ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ದಿ. ಪುನೀತ್ ರಾಜಕುಮಾರ ಫೋಟೋ ಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಅಪ್ಪು ಅಭಿಮಾನಿ ತಿಮ್ಮಯ್ಯ ನಾಯ್ಕ ಮಾತನಾಡಿ, ಅಪ್ಪು ಜೀವಂತವಿದ್ದಾಗ ಎಷ್ಟೋ ಅನಾಥ ಹಾಗೂ ನಿರ್ಗತಿಕರಿಗೆ ಅಸರೆಯಾಗಿದ್ದರು. ಅವರ ಆದರ್ಶದಂತೆ ಅವರ ಹುಟ್ಟುಹಬ್ಬದ ದಿನವಾದ ಇಂದು ಅಭಿಮಾನಿ ಬಳಗದಿಂದ ಭಟ್ಕಳದ ಜನತೆಗೆ ಒಂದು ಹೊತ್ತಿನ ಊಟ ನೀಡಿ ಅವರ ಹಸಿವು ನೀಗಿಸುವ ಕೆಲಸ ಮಾಡಿದ್ದೇವೆ ಎಂದರು. ಸುಮಾರು ಒಂದು ಸಾವಿರ ಜನರಿಗೆ ಅನ್ನದಾನ ಸೇವೆ ನಡೆಸಿದ್ದೇವೆ. ಅದೇ ರೀತಿ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಪ್ರತಿ ತಿಂಗಳಿಗೊಮ್ಮೆ ಏನಾದರೂ ಒಂದು ಸಹಾಯ ಮಾಡುವ ಕಾರ್ಯ ಮಾಡುತ್ತೇವೆ ಎಂದರು.

ಇದನ್ನೂ ಓದಿ : ಡಿ.ಆರ್.ಎಸ್. ಅಪ್ಪುವನ ಉದ್ಘಾಟನೆ

ಈ ವೇಳೆ ಅಭಿಮಾನಿಗಳಾದ ಗಣಪತಿ ಗೊರಟೆ, ಗಣಪತಿ ನಾಯ್ಕ, ಅಶೋಕ ನಾಯ್ಕ, ರಾಘು ನಾಯ್ಕ, ರೇವಂತ ನಾಯ್ಕ, ಅಭಿಷೇಕ ನಾಯ್ಕ, ಪ್ರಮೋದ ನಾಯ್ಕ, ವೆಂಕಟರಮಣ ನಾಯ್ಕ ಇದ್ದರು.