ಭಟ್ಕಳ : ಸಮುದ್ರದಲ್ಲಿ ಆಟ ಆಡಲು ಹೋದವರು ಇಬ್ಬರು ಸಮುದ್ರ ಪಾಲಾದ ಘಟನೆ ತಾಲೂಕಿನ ಹಡೀನ್ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ : ಪ್ರೀತಿಯ ನಾಟಕವಾಡಿ ಮತಾಂತರಕ್ಕೆ ಯತ್ನ : ಲವ್ ಜಿಹಾದ್ ಪ್ರಕರಣ ಬೆಳಕಿಗೆ

ಹೆಬಳೆಯ ಇನಾಮ್ ಅಸ್ಕೇರಿ (೧೪) ಮತ್ತು ಆಜಾದ್ ನಗರದ ಮೊಹಮ್ಮದ್ ಖಾಸಿಫ್ (೨೨) ಆಟ ಆಡಲು ಕುಟುಂಬದೊಂದಿಗೆ ಹಡೀನ್ ಗ್ರಾಮದ ಸೋಡಿಗದ್ದೆ ಬಳಿ ಸಮುದ್ರ ತೀರಕ್ಕೆ ಹೋಗಿದ್ದರು. ಬಾಲಕ ಇನಾಮ್ ಅಸ್ಕೇರಿ ಶವ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆದಿದೆ. ಇವರಿಬ್ಬರೂ ಕುಟುಂಬ ಸಮೇತರಾಗಿ ಸೋಡಿಗದ್ದೆ ಬಳಿ ಸಮುದ್ರ ತೀರಕ್ಕೆ ತೆರಳಿದ್ದರು. ಸುಮಾರು ೧೦ ಜನರಿದ್ದರು ಎಂದು ತಿಳಿದುಬಂದಿದೆ. ಸಮುದ್ರದಲ್ಲಿ ಆಟ ಆಡಲು ಹೋದವರು ನೀರು ಪಾಲಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸಾರ್ವಜನಿಕರು ಇನ್ನೋರ್ವನಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.