ಶಿರಸಿ: ಉತ್ತರ ಕನ್ನಡ ಜಿಲ್ಲಾ ಬಿಜೆಪಿಯಿಂದ ವಿವಿಧ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ಜಿಲ್ಲಾಧ್ಯಕ್ಷ ಎನ್. ಎಸ್.ಹೆಗಡೆ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಪ್ರಕರಣ : ಮಂಕಾಳ ವೈದ್ಯರ ವಿರುದ್ಧ ಬಿಜೆಪಿ ಗರಂ
ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟಕ್ಕೆ ರವಿಚಂದ್ರ ಶೆಟ್ಟಿ ಸಂಚಾಲಕರಾಗಿ, ಜಗದೀಶ ಅಂಬಿಗ ಮತ್ತು ದತ್ತಾತ್ರಯ ಎನ್.ದೇವಸ್ಥಳಿ ಸಹ-ಸಂಚಾಲಕರಾಗಿ ಹಾಗೂ ಸದಸ್ಯರನ್ನಾಗಿ ಪಾಂಡುರಂಗ ನಾಯ್ಕ ಭಟ್ಕಳ, ವಿನಾಯಕ ನಾಯ್ಕ ಮೂಡ್ಕಣಿ, ಕೃಷ್ಣ ಜೋಶಿ ಸಂಕೊಳ್ಳಿ, ವಿಶ್ಲೇಶ ದೇಶಭಂಡಾರಿ ಬ್ರಹ್ಮರು, ಗಜಾನನ ಕುಬಡೆ, ಪುನೀತ ಕಲ್ಲುಟ್ಕರ್, ಸಂದೀಪ ಭಟ್, ಶಶಿಕುಮಾರ ಎಚ್.ಎನ್., ರಾಘವೇಂದ್ರ ಚಲವಾದಿ, ಪರಶುರಾಮ ಸಿದ್ದಿ, ನಾಗನಗೌಡ ಪುರದನಗೌಡ್ರ, ಸಂತೋಷ ಹೆಗಡೆ ಅವರುಗಳನ್ನ ನಿಯುಕ್ತಿಗೊಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪ್ರಕೋಷ್ಠದ ಸಂಯೋಜಕರನ್ನಾಗಿ ವಿನೋದ ನಾಯ್ಕ ರಾಯಲಕೇರಿ, ಸಹ- ಸಂಯೋಜಕರನ್ನಾಗಿ ರಾಘವೇಂದ್ರ ಭಟ್ ಸುಂಕಸಾಳ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಡಾ.ಜಿ.ಜಿ.ಹೆಗಡೆ ಪ್ರಭಾರಿ, ಸುಬ್ರಾಯ ದೇವಾಡಿಗ ಸಂಚಾಲಕ, ಕುಮಟಾಕ್ಕೆ ಕೆ.ಜಿ.ನಾಯ್ಕ ಪ್ರಭಾರಿ, ಎಂ.ಜಿ.ಭಟ್ಟ ಸಂಚಾಲಕ, ಕಾರವಾರಕ್ಕೆ ವೆಂಕಟೇಶ ನಾಯಕ ಪ್ರಭಾರಿ, ನಿತ್ಯಾನಂದ ಗಾಂವ್ಕರ್ ಸಂಚಾಲಕ, ಹಳಿಯಾಳಕ್ಕೆ ಉಮೇಶ ಭಾಗ್ವತ ಪ್ರಭಾರಿ, ಸುಧಾಕರ ರೆಡ್ಡಿ ಸಂಚಾಲಕರನ್ನಾಗಿ, ಶಿರಸಿಗೆ ಶಾಂತಾರಾಮ ಸಿದ್ದಿ ಪ್ರಭಾರಿ, ಆರ್.ಡಿ.ಹೆಗಡೆ ಸಂಚಾಲಕ, ಯಲ್ಲಾಪುರಕ್ಕೆ ಸುನಿಲ್ ಹೆಗಡೆ ಪ್ರಭಾರಿ, ಗೋಪಾಲಕೃಷ್ಣ ಗಾಂವ್ಕರ್ ಅವರನ್ನ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಮಂಡಲ ಪ್ರಭಾರಿಗಳು :
ಭಟ್ಕಳ ಮಂಡಲ ಪ್ರಭಾರಿಗಳನ್ನಾಗಿ ಹೇಮಂತಕುಮಾರ ಗಾಂವ್ಕರ್, ಹೊನ್ನಾವರಕ್ಕೆ ಸಂಜಯ ನಾಯ್ಕ, ಕುಮಟಾಕ್ಕೆ ಆರತಿ ಗೌಡ, ಅಂಕೋಲಾಕ್ಕೆ ಸುಬ್ರಾಯ ದೇವಾಡಿಗ, ಕಾರವಾರ ಗ್ರಾಮೀಣ ಮಂಡಲಕ್ಕೆ ಜಿ.ಎಸ್.ಗುನಗಾ, ಕಾರವಾರ ನಗರಕ್ಕೆ ರಾಜೇಶ ಭಂಡಾರಿ, ಜೋಯಿಡಾಕ್ಕೆ ನಾಗರಾಜ ನಾಯಕ, ದಾಂಡೇಲಿಗೆ ಸುಬ್ರಾಯ ವಾಳ್ಕೆ, ಹಳಿಯಾಳಕ್ಕೆ ನಿತ್ಯಾನಂದ ಗಾಂವಕರ, ಮುಂಡಗೋಡ ಮಂಡಲಕ್ಕೆ ಚಂದ್ರು ಎಸಳೆ, ಯಲ್ಲಾಪುರಕ್ಕೆ ಸುಧಾಕರ ರೆಡ್ಡಿ, ಶಿರಸಿ ನಗರಕ್ಕೆ ಚಂದ್ರಕಲಾ ಭಟ್, ಶಿರಸಿ ಗ್ರಾಮೀಣಕ್ಕೆ ಅಶೋಕ ಚಲವಾದಿ ಮತ್ತು ಸಿದ್ದಾಪುರ ಕ್ಷೇತ್ರಕ್ಕೆ ಶ್ರೀಕಾಂತ ನಾಯ್ಕ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಮಹಿಳಾ ಮೋರ್ಚಾ ಪದಾಧಿಕಾರಿಗಳು :
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರನ್ನಾಗಿ ಶಾರದಾ ಜಿ.ನಾಯ್ಕ ಹೊನ್ನಾವರ, ರಾಜೇಶ್ವರಿ ಕೇಣಿಕರ್ ಅಂಕೋಲಾ, ಹೇಮಲತಾ ಹೆಗಡೆ ಯಲ್ಲಾಪುರ, ಸವಿತಾ ಗೊಂಡ ಭಟ್ಕಳ, ವಂದನಾ ಶಿರೋಡ್ಕರ್ ಕಾರವಾರ ನಗರ ಅವರನ್ನ ನೇಮಿಸಲಾಗಿದೆ. ಜಿಲ್ಲಾ ಕಾರ್ಯದರ್ಶಿಗಳನ್ನಾಗಿ ಶ್ರೇಯಾ ಮಹಾಲೆ ಭಟ್ಕಳ, ಅನುರಾಧಾ ಭಟ್ ಕುಮಟಾ, ರೇಣುಕಾ ಬಡಿಗೇರ ಮುಂಡಗೋಡ, ದೀಪಾ ಮಹಾಲಿಂಗಣ್ಣವರ್ ಶಿರಸಿ ನಗರ, ವೀಣಾ ಕುಂಬಾರ್ ಹಳಿಯಾಳ ಅವರನ್ನ ನಿಯುಕ್ತಿಗೊಳಿಸಲಾಗಿದೆ. ಖಜಾಂಚಿಯನ್ನಾಗಿ ಕವಿತಾ ಭಟ್ ಶಿರಸಿ ಗ್ರಾಮೀಣ, ಸಾಮಾಜಿಕ ಜಾಲತಾಣ ಸದಸ್ಯರನ್ನಾಗಿ ಸುನೀತಾ ಸಾರಂಗ್ ಅವರನ್ನ ನೇಮಿಸಿ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಪ್ರಕಟಿಸಿದ್ದಾರೆ.
ಇದನ್ನೂ ಓದಿ : ಲಂಚ ಸ್ವೀಕರಿಸುವಾಗ ರೆವಿನ್ಯೂ ಇನ್ಸ್ಪೆಕ್ಟರ್ ಬಂಧನ https://www.facebook.com/share/p/kJWoSZVLXwSjcyVv/?mibextid=Nif5oz