ಭಟ್ಕಳ: ತಾಲೂಕಿನ ಪ್ರಸಿದ್ಧ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಅಜ್ಞಾತ ಕಳ್ಳರು ಹುಂಡಿ ಒಡೆದು ಒಳಗಿದ್ದ ಹಣ ಕದ್ದೊಯ್ದ ಘಟನೆ (Temple theft) ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳ್ಳರು ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಹಾಗೂ ನೀರಿನ ಲೋಟ ಮುಚ್ಚಿ ಕುತಂತ್ರದ ಮೂಲಕ ದುಷ್ಕೃತ್ಯ ಎಸಗಿದ್ದು, ಒಡೆದ ಹುಂಡಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನು ಓದಿ: Case filed/ ಭಟ್ಕಳ ಮೂಳೆ ಪ್ರಕರಣಕ್ಕೆ ತಿರುವು: ಪುರಸಭೆ ಮುಖ್ಯಾಧಿಕಾರಿಯಿಂದ ದೂರು
ಇದರ ಅರ್ಧ ಕಿ ಮೀ ದೂರದಲ್ಲಿರುವ ಅರೇಕಲ್ ಜಟಕಾ ಮಹಾಸತಿ ದೇವಸ್ಥಾನಕ್ಕೂ ಕಳ್ಳರು ನುಗ್ಗಿ ಅಲ್ಲಿ ಸಹ ಹುಂಡಿ ಕದ್ದೊಯ್ದಿದ್ದಾರೆ. ಹಿಂದಿನ ಕಳ್ಳತನದ ತನಿಖೆ ಇನ್ನೂ ಮುಗಿಯುವ ಮುನ್ನವೇ ಮತ್ತೊಂದು ಕೃತ್ಯ ನಡೆದಿದೆ. ಘಟನೆಯ ಪರಿಶೀಲನೆಗೆ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಾಯ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ: folklorist/ ನಮ್ಮನ್ನಗಲಿದ ಜಾನಪದ ತಜ್ಞ ಡಾ ಎನ್ ಆರ್ ನಾಯಕ
ಈ ಮಧ್ಯೆ ಹೆಬಳೆ–ಕುಕ್ಕನೀರ ವೆಂಕಟಾಪುರ ಮಾರ್ಗದಲ್ಲಿ ತಾಮ್ರದ ಹಂಡೆ ಪತ್ತೆಯಾಗಿದೆ. ಹಂಡೆಯ ಮೇಲೆ “ಈರಮ್ಮ ಮಾಸ್ತಿ ಮೊಗೇರ” ಎಂಬ ಹೆಸರು ಕೆತ್ತಲಾಗಿದ್ದು, ಇದು ದೇವಾಲಯ ಕಳ್ಳತನಕ್ಕೆ (Temple theft) ಸಂಬಂಧಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹಂಡೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.
ಇದನ್ನು ಓದಿ: Doctor died/ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ವೈದ್ಯ ಸಾವು



