ಬೆಂಗಳೂರು : ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಾಡಿನ ಜನತೆಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಉತ್ತರ ಕನ್ನಡ ಸಹಿತ ರಾಜ್ಯದ ಹಲವೆಡೆ ಪ್ರಖರ ಬಿಸಿಲಿನ ಮಧ್ಯೆಯೇ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ : ಸುರೇಶ ಅಂಗಡಿ ಮೃತದೇಹವನ್ನು ತರಲು ಬಿಜೆಪಿಯೇ ಅವಕಾಶ ನೀಡಲಿಲ್ಲ: ಡಿಕೆಶಿ

ಮುಂದಿನ ೫ ದಿನ (ಮಾ. ೨೮ – ಏಪ್ರಿಲ್ ೧) ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಗುಡುಗು-ಮಿಂಚು ಸಹಿತ ಸಾಧಾರಣದಿಂದ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಸೆಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ : ೪ ದಿನಗಳ ಅಂತರದಲ್ಲಿ ಇಬ್ಬರು ಅಪ್ರಾಪ್ತ ಯುವತಿಯರು ನಾಪತ್ತೆ