ಕುಮಟಾ : ಮೂಡುಬಿದಿರೆಯ ಟ್ವಿಸ್ಟರ್ಸ್ ಡಾನ್ಸ್ ಅಕಾಡೆಮಿ ನಡೆಸಲಿರುವ ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಗೆ ಕುಮಟಾದ ಋತಿಕಾ ರೋಶನ್ ಮಹಾಲೆ ಆಯ್ಕೆಯಾಗಿದ್ದಾಳೆ. ಮೇ ೯ರಂದು ನಡೆಯುವ ಮಹಾಯೋದ್ಧಾ ಹೆಸರಿನ ಮೂರನೇ ಸರಣಿಯ ಈ ಸ್ಪರ್ಧೆ ಮಂಗಳೂರಿನ ಸ್ಪಂದನ ಟಿವಿಯಲ್ಲಿ ಪ್ರಸಾರವಾಗಲಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಋತಿಕಾ ಮಹಾಲೆ ಕುಮಟಾದ ಶಾಂತಿಕಾಂಬಾ ಕಲಾಕೇಂದ್ರದ ನೃತ್ಯಗುರು ವಿಶ್ವನಾಥ ಗುನಗಾ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ೧೦ ವರ್ಷ ವಯಸ್ಸಿನ ಋತಿಕಾ, ಬಾಳಿಗಾ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದಾಳೆ.
ಇದನ್ನೂ ಓದಿ : ಪತ್ರಕರ್ತರ ಸಂಘದಿಂದ ಉಪನ್ಯಾಸ ಕಾರ್ಯಕ್ರಮ
ಮಹಾಲೆ ಕಲಾವಿದ ಮನೆತನದ ಈ ಕುಡಿ ಟ್ರಾನಸ್ಪೋರ್ಟ ವ್ಯವಹಾರದ ನಡೆಸುತ್ತಿರುವ ರೋಶನ್ ಮತ್ತು ಗೃಹಿಣಿ ಜ್ಯೋತಿ ದಂಪತಿಯ ಏಕೈಕ ಪುತ್ರಿ. ಭರತನಾಟ್ಯ, ಕಥಕ್ ಬಲ್ಲ ಋತಿಕಾ ಜಾನಪದ ನೃತ್ಯ ಗಾತೆಯೂ ಹೌದು. ಈಗಿನ ಆಧುನಿಕ, ಪಾಶ್ಚಿಮಾತ್ಯ ಶೈಲಿಯಲ್ಲೂ ಹೆಜ್ಜೆಹಾಕಬಲ್ಲಳು.
ಐಎಎಸ್ ಅಧಿಕಾರಿಯಾಗಿಯಾಗುತ್ತೇನೆ, ಡ್ಯಾನ್ಸ್ ಮುಖಾಂತರ ಆರೋಗ್ಯ ಜಾಗೃತಿ ಮೂಡಿಸುತ್ತೇನೆ ಎನ್ನುವ ಋತಿಕಾ, ಐದು ವರ್ಷಗಳಿಂದ ಶಾಂತಿಕಾಂಬಾದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಈಗಾಗಲೇ ಕೆಲ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾಳೆ. ಝೀ ಟಿವಿಯ ಡಾನ್ಸ್ ಸ್ಪರ್ಧೆಯ ಆಡಿಶನ್ ಸುತ್ತಿನಲ್ಲಿ ಭಾಗವಹಿಸಿರುವ ಈಕೆ, ಅದರ ಫಲಿತಾಂಶದ ನಿರೀಕ್ಷೆಯಲ್ಲಿದ್ದಾಳೆ.
ಈಕೆಯದ್ದು ಆಲ್ರೌಂಡರ್ ಪ್ರತಿಭೆ. ಶಾಲೆಯಲ್ಲಿ ಭಾಷಣ, ಚಿತ್ರಕಲೆ ಹಾಡು ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿ ಇರ್ತಾಳೆ. ವಿದ್ಯಾಭ್ಯಾಸದಲ್ಲೂ ಮುಂದು. ಕರ್ನಾಟಕದ ಬೆಸ್ಟ್ ಡಾನ್ಸರ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಋತಿಕಾ ಗೆದ್ದು ಬರಲೆಂದು ‘ಭಟ್ಕಳ ಡೈರಿ’ ಹಾರೈಸುತ್ತದೆ.