ಭಟ್ಕಳ: ಮನೆಯೊಂದಕ್ಕೆ ಡಿಶ್ ಫೈಟಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ (Man dies) ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಗೊರಟೆಯ ಹೊನ್ನೆಮಡಿ ಶಿರಜ್ಜಿಮನೆ ಕೇರಿ ನಿವಾಸಿ, ಎಲೆಕ್ಟ್ರಿಷಿಯನ್ ಸಂತೋಷ ರಾಮಾ ನಾಯ್ಕ (೩೫) ಮೃತ ದುರ್ದೈವಿ. ಇವರು ಎಲೆಕ್ಟ್ರಿಷಿಯನ್ ಕೆಲಸದ ಜೊತೆಗೆ ಡಿಶ್ ಫಿಟಿಂಗ್ ಮಾಡುತ್ತಿದ್ದರು. ಡಿ ೩೦ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹೊನ್ನೆಮಡಿ ಕಟಗೇರಿ ನಿವಾಸಿ ಅಟೋರೀಕ್ಷಾ ಚಾಲಕ ಅರುಣ ಈರಪ್ಪ ನಾಯ್ಕ ಅವರ ಮನೆಗೆ ಟಾಟಾ ಸ್ಕೈ ಡಿಶ್ ಪಿಟ್ಟಿಂಗ್ ಮಾಡಲು ಹೋಗಿ ಮನೆಯ ಮೇಲೆ ಹತ್ತಿ ಪಿಟ್ಟಿಂಗ್ ಕೆಲಸ ಮಾಡುತ್ತಿರುವಾಗ ದುರ್ಘಟನೆ ನಡೆದಿದೆ.
ಇದನ್ನು ಓದಿ: Honors to achievers/ ಮಡಿವಾಳ ಸಮಾಜದ ಸಾಧಕರಿಗೆ ಸನ್ಮಾನ
ಆಕಸ್ಮಾತ ಆಯತಪ್ಪಿ ಕೆಳಗೆ ಬಿದ್ದು ತಲೆ ಹಿಂಬದಿಗೆ ಪೆಟ್ಟಾದವನಿಗೆ ಚಿಕಿತ್ಸೆಯ ಕುರಿತು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಸಂಜೆ ೫-೩೦ ಗಂಟೆಗೆ ಮೃತಪಟ್ಟ ಬಗ್ಗೆ ವೈದ್ಯರು ಖಾತ್ರಿಪಡಿಸಿದ್ದಾರೆ (Man dies). ಈ ಕುರಿತು ಮೃತನ ಸಹೋದರ, ಎಲೆಕ್ಟ್ರಿಷಿಯನ್ ನಾಗೇಶ ರಾಮ ನಾಯ್ಕ ದೂರು ದಾಖಲಿಸಿದ್ದಾರೆ.
ಇದನ್ನು ಓದಿ: Missing/ ನಾಪತ್ತೆಯಾಗಿದ್ದ ವಿಕಲಚೇತನ ಬಾಲಕಿ ರಕ್ಷಣೆ



