ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆ ಕ್ಷೇತ್ರದ ಶಾಖಾ ಮಠ ಭಟ್ಕಳದ ಕರಿಕಲ್ ನಲ್ಲಿ ಜು. ೨೧ರಿಂದ ಆ. ೩೦ರ ವರೆಗೆ ನಡೆಯಲಿದೆ. ಎಲ್ಲಾ ಸಮಾಜ ಮುಖಂಡರು ಹಾಗೂ ಬಂಧುಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬ್ರಹ್ಮಾನಂದ ಶ್ರೀಗಳು ಕರೆ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಕರಿಕಲ್ ಶಾಖಾ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಭಟ್ಕಳ ಹಾಗೂ ಸಾರದ ಹೊಳೆಯ ಎರಡೂ ಕೂಟಗಳ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ಉತ್ತರ ಕನ್ನಡ ಜಿಲ್ಲೆ ಬಗ್ಗೆ ಮಲತಾಯಿ ಧೋರಣೆ ಬೇಡ : ಅನಂತಮೂರ್ತಿ ಹೆಗಡೆ
ಕಾರ್ಯಕ್ರಮ ಹೇಗಿರಲಿದೆ?
ಜು. ೨೧ ರಂದು ಗುರುಪೂರ್ಣಿಮೆಯಂದು ಬೆಳಿಗ್ಗೆ ಚಾತುರ್ಮಾಸ್ಯ ವ್ರತ ಸಂಕಲ್ಪ ಪ್ರಯುಕ್ತ ರಾಮತಾರಕ ಯಜ್ಞ ವೈದಿಕ ವಿಧಿ ವಿಧಾನ ನಡೆಯಲಿದೆ. ಬಳಿಕ ಶ್ರೀ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಶ್ರೀಗಳ ಪುರ ಪ್ರವೇಶದ ವೈಭವದ ಮೆರವಣಿಗೆ ನಡೆಯುವುದು. ಕರಿಕಲ್ ಮಠದಲ್ಲಿ ಶ್ರೀ ರಾಮ ದೇವರಿಗೆ ವಿಶೇಷ ಪೂಜೆ, ಶ್ರೀಗಳ ಗುರುಪೂರ್ಣಿಮೆಯ ವ್ಯಾಸಪೀಠ ಪೀಠಾರೋಹಣ, ಗುರು ಪಾದುಕ ಪೂಜೆ, ಶ್ರೀಗಳ ಆಶೀರ್ವಚನ ಇರುವುದು. ಧಾರ್ಮಿಕ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ ಎಸ್. ವೈದ್ಯ ಉದ್ಘಾಟನೆ ಮಾಡಲಿದ್ದಾರೆ. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್ ಸಿ ಬಿ.ಕೆ.ಹರಿಪ್ರಸಾದ್, ಶಾಸಕರಾದ ವಿ. ಸುನಿಲ್ ಕುಮಾರ್ ಕಾರ್ಕಳ, ಬೇಳೂರು ಗೋಪಾಲಕೃಷ್ಣ ಸಾಗರ, ಭೀಮಣ್ಣ ನಾಯ್ಕ ಶಿರಸಿ, ಹರೀಶ್ ಪೂಂಜ ಬೆಳ್ತಂಗಡಿ, ದಿನಕರ ಶೆಟ್ಟಿ ಕುಮಟಾ, ಶಿವರಾಮ ಹೆಬ್ಬಾರ ಯಲ್ಲಾಪುರ, ಸತೀಶ ಸೈಲ್ ಕಾರವಾರ, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಶಿವಾನಂದ ನಾಯ್ಕ, ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಭಟ್ಕಳದ ಮಾಜಿ ಶಾಸಕರಾದ ಸುನೀಲ ನಾಯ್ಕ, ಜೆ. ಡಿ. ನಾಯ್ಕ ಮೊದಲಾದವವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಮನೆಯಂಗಳದಲ್ಲಿ ೭ ಅಡಿ ಉದ್ದದ ಹೆಬ್ಬಾವು ಪತ್ತೆ
ಚಾತುರ್ಮಾಸ್ಯ ಪರ್ವ ಕಾಲದಲ್ಲಿ ಪ್ರತಿದಿನ ಭಜನೆ, ಪಾದುಕ ಪೂಜೆ, ಸಂಜೆ ೬ರಿಂದ ೧೦ರ ತನಕ ಭಕ್ತಿಪ್ರಧಾನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ಅಮಾವಾಸ್ಯೆ ಹುಣ್ಣಿಮೆ, ಏಕಾದಶಿಯಂದು ಶ್ರೀಗಳು ಮೌನ ವೃತದಲ್ಲಿರುವುದರಿಂದ ಆ ದಿನಗಳಲ್ಲಿ ಸೂರ್ಯಾಸ್ತದ ಬಳಿಕ ಗುರುಗಳ ದರ್ಶನ ಇರುತ್ತದೆ. ಸೆ. ೩ರಂದು ಶ್ರೀ ಗುರುದೇವ ಮಠದಲ್ಲಿ ಶ್ರೀಗಳ ಪಟ್ಟಾಭಿಷೇಕ ವರ್ಧಂತಿ ನಡೆಯಲಿದೆ.
ಇದನ್ನೂ ಓದಿ : ಜಿಲ್ಲೆಗೆ ಸಿಎಂ ಬಂದು ಶಾಶ್ವತ ಪರಿಹಾರ ಕಲ್ಪಿಸಲಿ : ಈಶ್ವರ ನಾಯ್ಕ