ಶಿವಮೊಗ್ಗ : ನಗರ ಜೆಡಿಎಸ್ ವತಿಯಿಂದ ವಾರ್ಡ್ ನo. 17, 24 ಹಾಗೂ 25ರಲ್ಲಿ ಜೆಡಿಎಸ್ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯನ್ನು ರಂಗನಾಥ ಬಡಾವಣೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ : ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ ಸಂಭ್ರಮ
ಪಕ್ಷದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ನಗರ ಜೆಡಿಎಸ್ ನಾಯಕರು ವಾರ್ಡ್ ನo. 17, 24 ಮತ್ತು 25ರ ಕುಂದುಕೊರತೆಗಳ ಬಗ್ಗೆ ಗಮನಹರಿಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ ಬಿ ಪ್ರಸನ್ನ ಕುಮಾರ್, ದಿನನಿತ್ಯ ಸಾಮಾನ್ಯ ಜನ ಅನುಭವಿಸುತ್ತಿರುವ ಕಷ್ಟ ನೋವುಗಳಿಗೆ ನಗರ ಜೆಡಿಎಸ್ ಧ್ವನಿಯಾಗಿ ಕೆಲಸ ಮಾಡಲಿದೆ. ಸಮಾಜದ ಎಲ್ಲಾ ವರ್ಗದ ಜನರ ಪರವಾಗಿ ನಿಲ್ಲುವ ಪಣವನ್ನು ಜೆಡಿಎಸ್ ತೊಟ್ಟಿದೆ ಎಂದರು.

ಇದನ್ನೂ ಓದಿ : ಸಾಗರದಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ
ನಗರಾಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ, ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 35 ವಾರ್ಡ್ ಗಳಲ್ಲಿ ಸಾಮಾನ್ಯ ಜನ ನಿತ್ಯ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಮಾಹಿತಿ ಇದೆ. ಅವುಗಳನ್ನ ನಿವಾರಣೆ ಮಾಡುವ ನಿಟ್ಟಿನಲ್ಲಿ ನಗರ ಜೆಡಿಎಸ್ ಈಗಾಗಲೇ ಕಾರ್ಯಪ್ರವ್ರತ್ತವಾಗಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ನಗರ ಜೆಡಿಎಸ್ ಎಂದಿಗೂ ಹಿಂದೇಟು ಹಾಕುವುದಿಲ್ಲ. ಮುಂಬರುವ ದಿನಗಳಲ್ಲಿ ವಾರ್ಡ್ ನo. 17, 24 ಮತ್ತು 25 ರಲ್ಲಿ ಜೆಡಿಎಸ್ ಬಾವುಟ ಹಾರಾಡಲಿದೆ. ಶಿವಮೊಗ್ಗ ನಗರಪಾಲಿಕೆಯಲ್ಲಿ ಜೆಡಿಎಸ್ ಧ್ವಜ ಹಾರಾಡಲು ಪಕ್ಷದ ನಗರ ಕಾರ್ಯಕರ್ತರು, ಮುಖಂಡರು ಇದಕ್ಕಾಗಿ ವಿಶೇಷವಾಗಿ ಶ್ರಮಿಸಬೇಕು ಎಂದರು.
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಜಿಲ್ಲಾಧ್ಯಕ್ಷ ಡಾ. ಕಡಿದಾಳು ಗೋಪಾಲ, ಪ್ರತಿ ಬಡಾವಣೆಯ ಬೂತ್ ಸಮಿತಿಗಳೇ ಸುಪ್ರೀಂ ಆಗಬೇಕು. ಪ್ರತಿ ಬೂತ್ ಮಟ್ಟದ ಸಮಸ್ಯೆಗಳನ್ನು ಸ್ಥಳೀಯ ಮುಖಂಡರ ಮೂಲಕ ಅಥವಾ ನಗರ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದರೆ ಸಮಸ್ಯೆ ನಿವಾರಣೆ ಮಾಡಲಾಗುವುದು ಹಾಗೂ ನಗರ ಜೆಡಿಎಸ್ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಇದನ್ನೂ ಓದಿ : ಮುಸ್ಲಿಂ ಸಮುದಾಯ ವಿರುದ್ಧದ ಕಾನೂನು ರದ್ದತಿಗೆ ತಂಜೀಂ ಆಗ್ರಹ
ಸಭೆಯಲ್ಲಿ ಜಿಲ್ಲಾ ಮಹಾ ಪ್ರಧಾನಕಾರ್ಯದರ್ಶಿ ತ್ಯಾಗರಾಜ್, ನಗರ ಪಾಲಿಕೆ ಮಾಜಿ ಸದಸ್ಯ ಮಹೇಶ್, ಮುಖಂಡರಾದ ರಮೇಶ್ ನಾಯಕ್, ಜಯಣ್ಣ, ನಗರ ಜೆಡಿಎಸ್ ಪ್ರಮುಖರಾದ ಸುನಿಲ್ ಗೌಡ, ಲೋಹಿತ್, ವಿನಯ್, ಮನೋಹರ್, ದಯಾನಂದ್, ಶಂಕರ್, ರವಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಮೋದಿ ಗೆಲುವು ಅನಿವಾರ್ಯ: ಚಕ್ರವರ್ತಿ ಸೂಲಿಬೆಲೆ

ಈ ವಿಡಿಯೋ ನೋಡಿ :  https://fb.watch/qmI1OWzluR/?mibextid=Nif5oz