ಸಾಗರ: ಮನೆಯೊಂದರ ಟೆರೇಸ್ ಮೇಲೆ ವ್ಯಕ್ತಿಯೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಲ್ಲಿನ ನೆಹರೂ ನಗರದಲ್ಲಿ ಶುಕ್ರವಾರ ನಡೆದಿದೆ.

ಇದನ್ನೂ ಓದಿ : ಬೆಂಕಿ ಅವಘಡ : ಭಸ್ಮವಾಯ್ತು ಬಸ್

55 ವರ್ಷದ ಮಧುಸೂದನ್ ಎಂಬ ವ್ಯಕ್ತಿ ತನ್ನ ಸಂಬಂಧಿಕರ ಮನೆಯ ಟೆರೇಸ್ ಮೇಲೆ ಇರುವ ಸಿಂಟೆಕ್ಸ್ ಸ್ಟ್ಯಾಂಡ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ನಡೆದಿರುವ ಕಟ್ಟಡದ ಮುಂಭಾಗದಲ್ಲಿ ಗಾರೆ ಕೆಲಸ ಮಾಡುತ್ತಿರುವ ಕೆಲಸಗಾರರು ವ್ಯಕ್ತಿ ನೇಣು ಬಿಗಿದುಕೊಂಡಿರುವುದನ್ನು ಕಂಡು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಸಾಗರದ ಬೇಕರಿಯಲ್ಲಿ ಹಲವು ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದ ಮಧುಸೂದನ್ ಕೆಲವು ತಿಂಗಳುಗಳ ಹಿಂದೆ ಕೆಲಸ ಬಿಟ್ಟಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಉದ್ಯೋಗ ಅರಸುತ್ತ ವಿವಿಧ ಕಡೆ ಉದ್ಯೋಗ ಮಾಡುತ್ತಿದ್ದ. ಇಂದು ಶಿರಸಿಗೆ ಉದ್ಯೋಗ ಕೇಳಲು ಹೋಗಬೇಕಾಗಿತ್ತು ಎಂದು ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಉದ್ಯೋಗ ಸಿಗದೇ ಇರುವುದರಿಂದ ಬೇಸತ್ತು ಮಧುಸೂದನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ .

ಮಧುಸೂದನ್ ರವರ ನಿವಾಸ ಎಸ್ಎನ್ ನಗರದ ನಾಲ್ಕನೇ ತಿರುವಿನಲ್ಲಿ ಇದ್ದು, ನೆಹರೂ ನಗರದಲ್ಲಿ ಇರುವ ತನ್ನ ಸಂಬಂಧಿಕರ ಮನೆಯಲ್ಲಿ 10 ದಿನಗಳಿಂದ ನೆಲೆಸಿದ್ದ ಎಂದು ತಿಳಿದುಬಂದಿದೆ. ಮೃತಪಟ್ಟ ವ್ಯಕ್ತಿಗೆ ತಾಯಿ, ಹೆಂಡತಿ ಹಾಗೂ ಎರಡು ಗಂಡು ಮಕ್ಕಳಿದ್ದು ಓರ್ವ ಹಿರಿಯ ಮಗ ಹೊರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಮತ್ತೋರ್ವ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಸ್ಥಳಕ್ಕೆ 112 ಪೊಲೀಸ್ ವಾಹನದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ . ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಾಗಿದೆ.

ವರದಿ: ಜಮೀಲ್ ಸಾಗರ್

ಈ ವಿಡಿಯೋ ನೋಡಿ : ಭದ್ರಾವತಿಯಲ್ಲಿ ಚಿರತೆ ಸೆರೆ  https://fb.watch/qxqDIkpLUS/?mibextid=Nif5oz