ಮೈಸೂರು: ನಗರದ ರುದ್ರ ನೃತ್ಯಯೋಗ ಶಾಲಾ ವತಿಯಿಂದ, ಭುವನೇಶ್ವರದ ಒಡಿಸ್ಸಿ ಇಂಟರ್ನ್ಯಾಷನಲ್ ಫೋರಂ, ಪುರಿ ಜಗನ್ನಾಥ ಕಲ್ಚರಲ್ ಅಂಡ್ ವೆಲ್ ಫೇರ್ ಟ್ರಸ್ಟ್ ಹಾಗೂ ಮೈಸೂರು ಒಡಿಸ್ಸಿ ಕುಟುಂಬಗಳ ಸಹಭಾಗಿತ್ವದಲ್ಲಿ ಎರಡನೇ ಬಾರಿಗೆ ಒಡಿಸ್ಸಿ ಉತ್ಸವವನ್ನು ಆಯೋಜಿಸಲಾಗಿದೆ ಎಂದು ನೃತ್ಯಗುರು ಸಿಂಧು ಕಿರಣ್ ಹೇಳಿದರು.
ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ಸಂಜೆ ೫.೩೦ರಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಹೆಸರಾಂತ ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದರು.
ಪತ್ರಕರ್ತ, ಮೈಸೂರು ಒಡಿಸ್ಸಿ ಕುಟುಂಬದ ವೈದ್ಯನಾಥ್ ಮಾತನಾಡಿ, ಒಡಿಸ್ಸಿ ನೃತ್ಯ ಉತ್ಸವದಲ್ಲಿ ಮೈಸೂರಿನ ರುದ್ರ ನೃತ್ಯ ಯೋಗ ಶಾಲೆಯ ಸಿಂಧು ಕಿರಣ್, ದುಬೈನ ಜೋತ್ಸ್ನ ಅಪ್ಪಯ್ಯ, ಕೋಲ್ಕತ್ತದ ತಾನಿಯಾ ಮನ್ನಾ, ಬೆಂಗಳೂರಿನ ಲಿಪಿಕಾ ನಾಯಕ್, ಪಾಯಲ್ ಮುಂಜಂದಾರ್ ಮಂಡಲ್, ಏನಾಕ್ಷಿ ಮುಜುಂದಾರ್ ಮಂಡಲ್, ದೀಪಿಕಾ ರತ್ನಾಕರ್, ಜನೀಲ್ , ಕೆ. ಜ್ಯೋತಿ೯ಮಯಿ ಪಟ್ನಾಯಕ್, ಮೈಸೂರಿನ ಸ್ತುತ್ಯಶ್ರೀ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ನೃತ್ಯ ಕಲಾವಿದೆ ಪೃಥೆ ಹವಾಲ್ದಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುರಿ ಜಗನ್ನಾಥ ಕಲ್ಚರಲ್ ಅಂಡ್ ವೆಲ್ ಫೇರ್ ಟ್ರಸ್ಟ್ನ ಅಧ್ಯಕ್ಷ ಘನಶ್ಯಾಮ ಪ್ರಧಾನ್, ಮೈಸೂರಿನ ಭೂಷಣ್ ಅಕಾಡೆಮಿ ಆಫ್ ಪಫಾ೯ಮಿಂಗ್ ಆಟ್ಸ್ನ ಬದರಿ ದಿವ್ಯ ಭೂಷಣ್, ಶ್ರೀ ಕೃಷ್ಣ ಸೇವಾ ಸಮಿತಿಯ ಕಾಯ೯ದಶಿ೯ ಭಾರತಿ ಶ್ರೀಧರ ರಾಜ ಅರಸ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಬಿ.ವಿ. ಮೂತಿ೯, ವಿಶೇಷ ಆಹ್ವಾನಿತರಾಗಿ, ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದ ಬದರಿ ದಿವ್ಯ ಭೂಷಣ ಪಾಲ್ಗೊಳ್ಳಲಿದ್ದಾರೆ. ಒಡಿಸ್ಸಿ ನೃತ್ಯ ಕಲಾವಿದೆ ಪೃಥೆ ಹವಾಲ್ದಾರ್ ಕಾಯ೯ಕ್ರಮವನ್ನು ನಿವ೯ಹಿಸಲಿದ್ದಾರೆ.
– ಸಿಂಧು ಕಿರಣ್
ವಿದುಷಿ ಸಿಂಧು ಕಿರಣ್
ಮೈಸೂರು ಒಡಿಸ್ಸಿ ಉತ್ಸವದ ಸಂಚಾಲಕಿ ವಿದುಷಿ ಸಿಂಧು ಕಿರಣ್ರವರು, ೨೦೦೬ರಲ್ಲಿ ಸ್ಥಾಪನೆಗೊಂಡ, ಮೈಸೂರಿನ ಗೋಕುಲಂನಲ್ಲಿನ ರುದ್ರ ನೃತ್ಯ ಯೋಗಶಾಲೆಯ ಸಂಸ್ಥಾಪಕರು. ಸಂಗೀತ, ನೃತ್ಯ ಹಾಗೂ ಸಮರ ಕಲೆಯಾದ ಕಲಾರಿ ಪಯಟ್ಟುವಿನಲ್ಲಿ ಪರಿಣಿತಿ ಹೊಂದಿದ ಬಹುಮುಖ ಪ್ರತಿಭೆ. ಸ್ವತಃ ವೀಣಾ ವಾದಕಿಯಾಗಿರುವ ಇವರು, ಓಡಿಸ್ಸಿಯಲ್ಲದೇ ಮೋಹಿನಿ ಅಟ್ಟಂನಲ್ಲಿಯೂ ಗಮನ ಸೆಳೆದಿದ್ದಾರೆ. ನೃತ್ಯದ ಜೊತೆಗೆ ಯೋಗ ಶಿಕ್ಷಣವನ್ನು ಸಹ ನೀಡುತ್ತಿದ್ದಾರೆ. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕೇರಳ ಜಾನಪದ ನೃತ್ಯಗಳು ಹಾಗೂ ಭರತ ನಾಟ್ಯಂನಲ್ಲಿ ಆಸಕ್ತಿ ಹೊಂದಿ ಅಭ್ಯಾಸ ಮಾಡಿರುವ ಇವರು, ಹೆಸರಾಂತ ನೃತ್ಯ ಕಲಾವಿದೆ ಪ್ರೊತಿಮಾ ಗೌರಿ ಬೇಡಿಯವರ ನೃತ್ಯದಿಂದ ಪ್ರಭಾವಿತರಾಗಿ ಬೆಂಗಳೂರಿನ ನೃತ್ಯ ಗ್ರಾಮದಲ್ಲಿ ನೃತ್ಯಾಭ್ಯಾಸ ಮಾಡಿದ್ದಾರೆ. ನಾಡಿನ ಅತ್ಯಂತ ಗೌರವಾನ್ವಿತ ನೃತ್ಯಗುರು ಪದ್ಮಭೂಷಣ ಪಂಡಿತ್ ಕೇಳು ಚರಣ ಮಾಹಾಪಾತ್ರರವರಲ್ಲಿ ನೃತ್ಯಾಭ್ಯಾಸ ಮಾಡಿರುವ ಹಿರಿಮೆ ಇವರದ್ದು. ನೃತ್ಯಗ್ರಾಮದಲ್ಲಿ ಶಿಕ್ಷಣ ಪಡೆದ ನಂತರ ಒಡಿಸ್ಸಿಯ ಮೂಲ ಸೆಲೆಯಾದ ಭುವನೇಶ್ವರದಲ್ಲಿ ಗುರು ಶ್ರೀ ರತಿಕಾಂತ ಮಹೊಪಾತ್ರ, ಗುರು ಶ್ರೀ ರಮಣಿ ರಂಜನ್ ಜೆನ್ನಾರಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಪ್ರಸಿದ್ಧ ಕಲಾಮಂಡಲಂನ ಕಲ್ಯಾಣಕುಟ್ಟಿ ಅಮ್ಮರವರಲ್ಲಿ ಮೋಹಿನಿ ಆಟ್ಟಂ ಅಭ್ಯಾಸ ಮಾಡಿರುವ ಇವರು, ನಂತರ ಗುರು ಸ್ಮಿತಾ ರಂಜನ್, ಗುರು ಭಾರತೀ ಶಿವಾಜಿಯವರಲ್ಲಿಯೂ ಶಿಕ್ಷಣ ಪಡೆದಿದ್ದಾರೆ. ನೃತ್ಯ ಗುರು ಸಿಂಧು ಕಿರಣ್ರವರ ವಿಶೇಷತೆಯೆಂದರೆ, ತೀವ್ರತರವಾದ ಭಾವಾಭಿವ್ಯಕ್ತಿ. ಅಭಿನಯದಲ್ಲಿ ವಿಶೇಷ ಪರಿಣಿತಿ ಸಾಧಿಸಿರುವ ಇವರು, ಈ ಕುರಿತಾಗಿ ಗುರು ಕಲಾನಿಧಿ ನಾರಾಯಣ್ರವರಲ್ಲಿ ತರಬೇತಿ ಪಡೆದಿದ್ದಾರೆ.
ಸಿಂಧು ಕಿರಣ್ರವರು, ೧೯೯೨ರಿಂದ ದೇಶ ವಿದೇಶಗಳ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರಲ್ಲದೇ ಯೂರೋಪ್, ದಕ್ಷಿಣ ಪೂರ್ವ ಏಷ್ಯಾದೇಶಗಳಲ್ಲಿ ಒಡಿಸ್ಸಿ ನೃತ್ಯ ಕುರಿತು ಕಾರ್ಯಾಗಾರಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಶ್ರೇಷ್ಟವಾದ ಹಾಗೂ ಈ ಭಾಗದಲ್ಲಿ ಅಪರೂಪ ಎನ್ನಬಹುದಾದ ಒಡಿಸ್ಸಿ ನೃತ್ಯ ಪರಂಪರೆಯನ್ನು ಪರಿಚಯಿಸುವ ದೃಷ್ಟಿಯಿಂದ ಸಿಂಧು ಕಿರಣ್ರವರು ಮೈಸೂರು ಓಡಿಸ್ಸಿ ಉತ್ಸವ್ವನ್ನು ಸಂಘಟಿಸಿದ್ದಾರೆ. ದೇಶ ವಿದೇಶಗಳ ಗಣ್ಯ ನೃತ್ಯ ಕಲಾವಿದರನ್ನು ಆಹ್ವಾನಿಸಿದ್ದಾರೆ.