ಭಟ್ಕಳ: ಇಲ್ಲಿನ ತಟ್ಟಿಹಕ್ಕಲ್ ಗ್ರೀನ್ ಪಾರ್ಕನಲ್ಲಿ ನಡೆದ ನಾಮಧಾರಿ ಪ್ರೀಮಿಯರ್ ಲೀಗ್-೨೦೨೪ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಕೆ ಪ್ರೆಂಡ್ಸ್ ಚಾಂಪಿಯನ್ ಪಟ್ಟಕ್ಕೇರಿತು.
ಇದನ್ನೂ ಓದಿ : ಭಟ್ಕಳ ಸ್ಪೋರ್ಟ್ಸ್ ಕ್ಲಬ್ ಮೊದಲ ಡಿವಿಷನ್ಗೆ ಅರ್ಹತೆ
ಪೈನಲ್ ಪಂದ್ಯದಲ್ಲಿ ಬೆಳಕೆ ಫ್ರೆಂಡ್ಸ್ ತಂಡವು ಮುರುಡೇಶ್ವರದ ಸಾನಿಕಾ ಪ್ರೆಂಡ್ಸ್ ತಂಡವನ್ನು ೪ ವಿಕೆಟ್ ಗಳಿಂದ ಸೋಲಿಸಿ ನಾಮಧಾರಿ ಟ್ರೋಪಿ ಹಾಗೂ ೫೦ ಸಾವಿರ ನಗದು ಬಹುಮಾನವನ್ನು ಪಡೆಯಿತು. ಮುರುಡೇಶ್ವರದ ಸಾನಿಕಾ ಪ್ರೆಂಡ್ಸ್ ೩೦ ಸಾವಿರ ನಗದು ಹಾಗೂ ಟ್ರೋಪಿಯನ್ನು ಪಡೆಯಿತು.
ಈ ವಿಡಿಯೋ ನೋಡಿ : ಸರ್ಕಾರಿ ಶಾಲೆಯಲ್ಲಿ ಇಕೋ ಪಾರ್ಕ್ https://fb.watch/qssRfldKqX/?mibextid=Nif5oz
ಟಾಸ್ ಗೆದ್ದು ಬ್ಯಾಂಟಿಗ್ ನಡೆಸಿದ ಸಾನಿಕ ತಂಡವು ೮ ಓವರುಗಳಲ್ಲಿ ೬ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತ್ತು. ನಂತರ ಬ್ಯಾಟಿಂಗ್ ನಡೆಸಿದ ಬೆಳಕೆ ಪ್ರೆಂಡ್ಸ್ ತಂಡವು ೬ ವಿಕೆಟ್ ನಷ್ಟದಲ್ಲಿ ಗುರಿ ತಲುಪಿ ವಿಜಯಿಯಾಯಿತು.
ಸೆಮಿಪೈನಲ್ ಪಂದ್ಯದಲ್ಲಿ ಸಾನಿಕಾ ಪ್ರೆಂಡ್ಸ್ ತಂಡವು ಕೆ.ಜಿ.ಎಫ್ ಪ್ರೆಂಡ್ಸ್ ತಂಡವನ್ನು ಸೋಲಿಸಿ ಪೈನಲ್ ಹಂತಕ್ಕೆ ಬಂದಿತ್ತು. ಬೆಳಕೆ ಪ್ರೆಂಡ್ಸ್ ತಂಡವು ಮೂರು ಪಂದ್ಯಗಳನ್ನು ಗೆದ್ದು ಅಂಕಗಳ ಆಧಾರದ ಮೇಲೆ ಪೈನಲ್ ಹಂತಕ್ಕೆ ತಲುಪಿತು.
ಪ್ರೆಂಡ್ಸ್ ಬೆಳಕೆ ತಂಡದ ಅರುಣ್ ನಾಯ್ಕ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು. ಉತ್ತಮ ಬ್ಯಾಂಟಿಂಗ್ ಪ್ರಶಸ್ತಿಯನ್ನು ಸಿದ್ದಾರ್ಥ ನಾಯ್ಕ ಪಡೆದರು. ಉತ್ತಮ ಬೌಲಿಂಗ್ ಪ್ರಶಸ್ತಿಯನ್ನು ನಾಗೇಶ ನಾಯ್ಕ ಪಡೆದರು.
ಬಹುಮಾನ ವಿತರಣ ಸಮಾರಂಭದಲ್ಲಿ ಮೊದಲ ಬಹುಮಾನದ ಪ್ರಾಯೋಜಕರಾದ ಎ.ಪಿ.ಎಂ ಸಿ. ಅಧ್ಯಕ್ಷ ಗೋಪಾಲ ನಾಯ್ಕ, ಹಳೆಕೋಟೆ ಹನುಮಮತ ದೇವಸ್ಥಾನದ ಸದಸ್ಯ ಆರ್.ಕೆ. ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಬೆಳಕೆ ಸೊಸೈಟಿ ಅಧ್ಯಕ್ಷ ಮಾದೇವ ನಾಯ್ಕ, ಭಟ್ಕಳ ಗುರುಮಠದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಪ್ರಮುಖರಾದ ಕೃಷ್ಣ ಪ್ರಥ್ವಿ, ರಾಘವೇಂದ್ರ ನಾಯ್ಕ, ಭವಾನಿಶಂಕರ ನಾಯ್ಕ, ಶ್ರೀಕಾಂತ ನಾಯ್ಕ, ವಿನಾಯಕ ನಾಯ್ಕ, ಗಂಗಾಧರ ನಾಯ್ಕ, ಮಹೇಶ ನಾಯ್ಕ, ಮನಮೋಹನ ನಾಯ್ಕ, ಶಿವಾನಂದ ನಾಯ್ಕ, ಭಾಸ್ಕರ ನಾಯ್ಕ, ಸಂದೀಪ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.