ಭಟ್ಕಳ: ಇಲ್ಲಿನ ಪುರವರ್ಗದ ಶ್ರೀ ನಾರಾಯಣ ಗುರು ವಸತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ‘ಶಾಲಾ ಸಂಸತ್ ಚುನಾವಣೆ’ ನಡೆಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಹಾಗೂ ಮತದಾನದ ಮಹತ್ವ ತಿಳಿಯುವ ದೃಷ್ಟಿಯಿಂದ ಚುನಾವಣಾ ಆಯೋಗ ಅನುಸರಿಸುವ ಬಹುತೇಕ ಎಲ್ಲಾ ನಿಯಮಗಳನ್ನು ಅನುಸರಿಸಲಾಗಿತ್ತು. ಚುನಾವಣಾ ಸಂಬಂಧ ಶಾಲಾ ಹಂತದಲ್ಲಿ ಪ್ರೆಸ್ ಮೀಟ್ ಕರೆದು ಪ್ರಕಟಣೆ ಹೊರಡಿಸಿ ನಾಮಪತ್ರ ಸಲ್ಲಿಸುವುದು, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು, ಅಂತಿಮ ಸುತ್ತಿನಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಬೇರೆ ಬೇರೆ ತರಗತಿಗೆ ಹೋಗಿ ತಮಗೆ ಮತ ನೀಡುವಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು ಇತ್ಯಾದಿ ಎಲ್ಲಾ ನಿಯಮಗಳನ್ನು ಅನುಸರಿಸಲಾಯಿತು.
ಇದನ್ನೂ ಓದಿ : ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ : ಪರ್ತಗಾಳಿ ಜೀವೋತ್ತಮ ಮಠಾಧೀಶ
ಅದರಲ್ಲೂ ವಿಶೇಷವಾಗಿ ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ತಂತ್ರಜ್ಞಾನ ಬಳಸಿ ಚುನಾವಣೆ ನಡೆಸಲಾಯಿತು. ಇಲೆಕ್ಟ್ರಾನಿಕ್ ವೋಟಿಂಗ ಮಷಿನ್ ಆಗಿ ಮೊಬೈಲ್ ಫೋನ್ಗಳನ್ನು ಬಳಸಿಕೊಂಡಿರುವುದು ವಿಶೇಷವಾಗಿತ್ತು. ಒಟ್ಟಿನಲ್ಲಿ ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಮತದಾನದಲ್ಲಿ ಭಾಗಿಯಾಗಿ ತಮ್ಮ ನಾಯಕರನ್ನು ಆಯ್ಕೆ ಮಾಡಿದರು.
ಇದನ್ನೂ ಓದಿ : ‘ನಮ್ಮ ಕ್ಲಿನಿಕ್’ ಜಾಲಿಯಲ್ಲಿ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ
ಆಯ್ಕೆಯಾದವರು :
ಶಾಲಾ ಮುಖ್ಯಮಂತ್ರಿಯಾಗಿ ಹರ್ಷಿತ್ ದೊಡ್ಡಮನಿ, ಉಪ ಮುಖ್ಯಮಂತ್ರಿಯಾಗಿ ಪ್ರಿಯಾ ನಾಯ್ಕ, ಪ್ರಾರ್ಥನಾ ಮಂತ್ರಿಯಾಗಿ ಮಂಜುನಾಥ ನಾಯ್ಕ, ಶಿಕ್ಷಣ ಮಂತ್ರಿಯಾಗಿ ವಿದ್ಯಾ ದೇವಡಿಗ, ಕ್ರೀಡಾ ಮಂತ್ರಿಯಾಗಿ ಸೃಜನ್ ಬಿ. ನಾಯ್ಕ, ಉಪ ಕ್ರೀಡಾ ಮಂತ್ರಿಯಾಗಿ ಗಗನದೀಪ ನಾಯ್ಕ, ಆರೋಗ್ಯ ಮಂತ್ರಿಯಾಗಿ ಲೋಹಿತ ಗೊಂಡ, ಸಾಂಸ್ಕೃತಿಕ ಮಂತ್ರಿಯಾಗಿ ಲಿಖಿತ್ ನಾಯ್ಕ, ಪ್ರವಾಸ ಮಂತ್ರಿಯಾಗಿ ಚಿರಾಗ್ ನಾಯ್ಕ ಮತ್ತು ಸ್ವಚ್ಛತಾ ಮಂತ್ರಿಯಾಗಿ ದಿಗಂತ ನಾಯ್ಕ ಆಯ್ಕೆಯಾದರು.
ಇದನ್ನೂ ಓದಿ : ರಸ್ತೆ ದುರಸ್ತಿಗೆ ಮುಂದಾದ ಸಾರ್ವಜನಿಕರು !
ಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರು ರಮೇಶ ನಾಯ್ಕ ಇವರ ಮುಂದಾಳತ್ವದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿ ನಿರುಪಮಾ ನಾಯ್ಕ ಇವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಇವರೊಂದಿಗೆ ಬೇರೆ ಬೇರೆ ಅಧಿಕಾರಿಗಳಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಇದನ್ನೂ ಓದಿ : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜೋಗ ಜಲಪಾತ