ಭಟ್ಕಳ : ಸಾರ್ಧ ಪಂಚಶತಮಾನೋತ್ಸವದ ಪ್ರಯುಕ್ತ ಭಟ್ಕಳದ ವಡೇರ ಮಠದಲ್ಲಿ ೫೫೦ ಕೋಟಿ ಬೃಹತ್‌ ಶ್ರೀರಾಮನಾಮ ಜಪ ಅಭಿಯಾನ ನಡೆಯುತ್ತಿದೆ. ಮಂಗಳವಾರ ಗೋಕರ್ಣದ ಪರ್ತಗಾಳಿ ಶ್ರೀಗಳು ಭೇಟಿ ನೀಡಿ ರಾಮನಾಮ ಜಪ ಅಭಿಯಾನದಲ್ಲಿ ಪಾಲ್ಗೊಂಡರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಭಟ್ಕಳದ ವಡೇರ ಮಠದಲ್ಲಿ ಏ.೧೭ರಿಂದ ೫೫೦ ಕೋಟಿ ಬೃಹತ್‌ ಶ್ರೀರಾಮ ನಾಮ ಜಪ ಅಭಿಯಾನ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಗೋಕರ್ಣದ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್‌ ವಿದ್ಯಾಧೀಶ ತೀರ್ಥ ಶ್ರೀಗಳು ಭೇಟಿ ನೀಡಿದರು. ಮೂಲ ಮಠದಕ್ಕೆ ಭೇಟಿ ನೀಡಿದ ಶ್ರೀಗಳನ್ನು ಭಕ್ತವೃಂದ ಅದ್ದೂರಿಯಾಗಿ ಬರಮಾಡಿಕೊಂಡಿತು. ಮೊದಲು ಶ್ರೀಗಳು ಶ್ರೀರಾಮದೇವರಿಗೆ ಪೂಜೆ ನೆರವೇರಿಸಿದರು. ರಾಮನಾಮ ಜಪ ಅಭಿಯಾನ ಸಂಕಲ್ಪ ಸಾಂಗವಾಗಿ ನೆರವೇರುವಂತೆ ಪ್ರಾರ್ಥಿಸಿದರು. ಬಳಿಕ ಶ್ರೀಗಳ ಉಪಸ್ಥಿತಿಯಲ್ಲಿ ಸಂಜೆ ೭ ಗಂಟೆಯ ತನಕ ಬೃಹತ್‌ ಶ್ರೀರಾಮ ನಾಮ ಜಪ ಅಭಿಯಾನ ನಡೆಸಲಾಯಿತು.

ಇದನ್ನೂ ಓದಿ : ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಮನವಿ

ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ, ವಡೇರ ಮಠಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಎಲ್ಲರೂ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀರಾಮ ನಾಮ ಜಪ ಮಾಡಿದರು. ಇನ್ನು ಈ ರಾಮನಾಮ ಜಪ ಅಭಿಯಾನ ಅಕ್ಟೋಬರ್‌ ೧೮ರವರೆಗೆ ನಿರಂತರವಾಗಿ ನಡೆಯಲಿದೆ.