ಧಾರವಾಡ : ಮಗು ಮಲಗುವಾಗ ಅಳುತ್ತದೆ ಎಂಬ ಕಾರಣಕ್ಕೆ ತಂದೆಯೊಬ್ಬ ಮಗುವನ್ನು ಗೋಡೆಗೆ ಎಸೆದು ಬಿಸಾಕಿದ ಘಟನೆ ಧಾರವಾಡ ತಾಲೂಕು ಯಾದವಾಡ ಗ್ರಾಮದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ನಿಗಮ ಮಂಡಳಿ ನೇಮಕ : ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಸುದ್ದಿ
ಒಂದು ವರ್ಷದ ಹೆಣ್ಣು ಮಗು ಸಾವು ಬದುಕಿನ ಮಧ್ಯೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದೆ. ಶಂಭುಲಿಂಗಯ್ಯ ಶಹಾಪೂರಮಠ ಎಂಬಾತ ಈ ಕೃತ್ಯ ಎಸಗಿದ ಪಾಪಿ ತಂದೆ.
ಈ ವಿಡಿಯೋ ನೋಡಿ : ಸರ್ಕಾರಿ ನೌಕರರ ವಾಲಿಬಾಲ್ ಪಂದ್ಯಾವಳಿ https://fb.watch/qvWI2k9P80/?mibextid=Nif5oz
ಕಳೆದ ರಾತ್ರಿ ಮಗು ಅಳುತ್ತಿತ್ತು. ಅಳುವ ಮಗುವಿಗೆ ಸಮಾಧಾನ ಪಡಿಸುವ ಬದಲಿಗೆ ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾನೆ. ಗೋಡೆಗೆ ರಭಸವಾಗಿ ಎಸೆದ ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಮಗುವಿನ ತಾಯಿ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಣ್ಣುಮಗು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ.
ಕುಟುಂಬಸ್ಥರು ಗರಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಪಿ ತಂದೆ ಶಂಭುಲಿಂಗಯ್ಯನನ್ನು ಬಂಧಿಸಿದ್ದಾರೆ.