ಭಟ್ಕಳ: ಹೊನ್ನಾವರ ತಾಲೂಕಿನ ಕವಲಕ್ಕಿಯ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಪ್ರಯುಕ್ತ ನಾಟ್ಯಶ್ರೀ ಬೆಳ್ಳಿಸಂಭ್ರಮ ಸರಣಿ ತಾಳಮದ್ದಳೆ ಕಾರ್ಯಕ್ರಮ ವಿವಿಧೆಡೆ ಆಯೋಜಿಸಲಾಗುತ್ತಿದೆ. ಅದರ ಅಂಗವಾಗಿ ಇಲ್ಲಿನ ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಕಿಷ್ಕಿಂಧಾ ಆಖ್ಯಾನವನ್ನು ಪ್ರದರ್ಶಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅತಿಥಿಗಳಾಗಿ ವೇ.ಮೂ.ಕೃಷ್ಣಾನಂದ ಭಟ್ಟ ಬಲ್ಸೆ ದಂಪತಿಗಳು, ಗೋಳಿಕುಂಬ್ರಿ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮಧ್ಯಸ್ಥ, ಹೊನ್ನಾವರ ಹವ್ಯಕ ಮಂಡಳದ ಅಧ್ಯಕ್ಷ ಆರ್.ಜಿ. ಹೆಗಡೆ ಆಗಮಿಸಿದ್ದರು. ಅತಿಥಿಗಳು ದೀಪ ಪ್ರಜ್ವಲನಗೈದು ಫಲ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ : ಭಟ್ಕಳಕ್ಕೆ ಭೇಟಿ ನೀಡಿದ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಚಾರ್ಯ ಭವನದ ಪ್ರಮುಖ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ, ನಮ್ಮೆಲ್ಲರ ಯೋಗ ಮತ್ತು ಭಾಗ್ಯ ಎನ್ನುವಂತೆ ರಾಮಾಯಣ ತಾಳಮದ್ದಳೆಯ ಎರಡು ಆಖ್ಯಾನಗಳನ್ನು ಆಚಾರ್ಯ ಭವನದಲ್ಲಿ ಮಾಡಲಾಗುತ್ತಿದೆ. ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಯಕ್ಷಗಾನ ಎನ್ನುವ ಪದವೇ ನಮ್ಮನ್ನು ಧಾರ್ಮಿಕ ಜಾಗೃತಿಯತ್ತ ಕೊಂಡೊಯ್ಯತ್ತದೆ ಎಂದರು. ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೌರಾಣಿಕ ಕಥೆಗಳುಳ್ಳ ತಾಳಮದ್ದಳೆ ಪ್ರದರ್ಶನ ಶ್ಲಾಘನೀಯ ಕಾರ್ಯ ಎಂದರು.
ಇದನ್ನೂ ಓದಿ : ಚಿತ್ರಾಪುರ ಮಠದ ಅರ್ಚಕ ರಾಮೇಶ್ವರ ಹರಿದಾಸ ನಿಧನ
ಇದೇ ಸಂದರ್ಭದಲ್ಲಿ ಮುರುಡೇಶ್ವರದ ಯಕ್ಷರಕ್ಷೆ ಅಧ್ಯಕ್ಷ ಡಾ. ಐ.ಆರ್. ಭಟ್ಟ ಅವರಿಗೆ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ “ರಜತ ಗೌರವ” ಸಮರ್ಪಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಫ್ರೊ. ಎಸ್. ಶಂಭು ಭಟ್ಟ ಕಡತೋಕ, ವಿದ್ವಾನ್ ನೀಲಕಂಠ ಯಾಜಿ ಬೈಲೂರು, ಕೊಂಡದಕುಳಿ ರಾಮಚಂದ್ರ ಹೆಗಡೆ, ಮೋಹನ ಭಾಸ್ಕರ ಹೆಗಡೆ, ಕೇಶವ ಕೊಳಗಿ ಮುಂತಾದವರು ಉಪಸ್ಥಿತರಿದ್ದರು. ನಾಟ್ಯಶ್ರಿ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ : ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ
ನಂತರ ನಡೆದ ಯಕ್ಷಗಾನ ತಾಳಮದ್ದಳೆ “ಕಿಷ್ಕಿಂದಾ” ಪ್ರಸಂಗದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ ಕರ್ಕಿ, ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ಟ, ರಾಮಚಂದ್ರ ಹೆಗಡೆ ಕೊಂಡದಕುಳಿ, ಜಿ.ಕೆ. ಹೆಗಡೆ ಹರಿಕೇರಿ ಭಾಗವಹಿಸಿದ್ದರು. ರಾಮನಾಗಿ ಭಾಗವಹಿಸಿದ್ದ ಮೋಹನ ಭಾಸ್ಕರ ಹೆಗಡೆ ಅವರ ಅರ್ಥಗಾರಿಕೆ ಎಲ್ಲರ ಗಮನ ಸೆಳೆಯಿತು.