ಭಟ್ಕಳ: ತಾಲೂಕಿನ ಕಾಯ್ಕಿಣಿ ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾಗಿರುವ ವಿಜೇತಾ ಶಾನಭಾಗ ಪ್ರತಿಷ್ಠಿತ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ (best service) ಭಾಜನರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಾಜ್ಯ ಸರ್ಕಾರವು ಅತ್ಯುತ್ತಮ ಆಡಳಿತ, ಜನಸೇವೆಗೆ ಸಲ್ಲಿಸಿದ ಶ್ರೇಷ್ಠ ಕಾರ್ಯಕ್ಷಮತೆ ಹಾಗೂ ಗಣನೀಯ ಸಾಧನೆಗಳನ್ನು ಗುರುತಿಸಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಈ ಗೌರವಾನ್ವಿತ ಪ್ರಶಸ್ತಿಗೆ, ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಆಡಳಿತಾಧಿಕಾರಿಗಳ ಪೈಕಿ ಭಟ್ಕಳ (Bhatkal) ತಾಲೂಕಿನ ವಿಜೇತಾ ಶಾನಭಾಗ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನು ಓದಿ: National Voters Day/ ರಾಷ್ಟ್ರೀಯ ಮತದಾರರ ದಿನಾಚರಣೆ, ಸವಿತಾ ಮಹರ್ಷಿ ಜಯಂತಿ
ಗಣರಾಜ್ಯೋತ್ಸವ (republic Day) ಸಮಾರಂಭದ ಅಂಗವಾಗಿ ಕಾರವಾರ (Karwar) ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya )ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸರ್ವೋತ್ತಮ ಸೇವಾ (best service) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದನ್ನು ಓದಿ: New buses/ ಬಿಜೆಪಿ, ಕಾಂಗ್ರೆಸ್ ಉತ್ತರ ಕನ್ನಡ ಜಿಲ್ಲೆಗೆ ಕೊಟ್ಟ ಹೊಸ ಬಸ್ ಎಷ್ಟು ಗೊತ್ತಾ?



