ಭಟ್ಕಳ : ಕರ್ನಾಟಕ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಕಾನೂನುಗಳನ್ನು ರೂಪಿಸಿದ್ದು, ಆ ಎಲ್ಲ ಕಾನೂನುಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಮಜ್ಲಿಸೆ ಇಸ್ಲಾಹ-ವ-ತಂಜೀಂ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಇದನ್ನೂ ಓದಿ : ಔಷಧಿ ಅಂಗಡಿಗೆ ನುಗ್ಗಿ ಕಳ್ಳತನ
ಬುಧವಾರ ವಿಧಾನಸೌಧದಲ್ಲಿ ಮಜ್ಲಿಸೆ ಇಸ್ಲಾಹ-ವ-ತಂಜೀಂ ನೇತೃತ್ವದ ನಿಯೋಗದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೋಮುವಾದಿ ಅಜೆಂಡಾ ಹೊಂದಿರುವ ‘ಹಿಜಾಬ್, ಹಿಂದುಳಿದ ವರ್ಗಗಳ ಪ್ರವರ್ಗ 2 ‘ಬಿ’ ಮೀಸಲಾತಿ ರದ್ದು, ಮತಾಂತರ ನಿಷೇಧ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾನೂನುಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿತು.
ಈ ವಿಡಿಯೋ ನೋಡಿ : ನಾಗಮಾಸ್ತಿ ದೇವರ ಭವ್ಯ ಮೆರವಣಿಗೆ https://www.facebook.com/share/v/3ULB1kMgizExNipW/?mibextid=oFDknk
ಬಿಜೆಪಿ ಸರಕಾರದ ಕೋಮುವಾದಿ ಮತ್ತು ಫ್ಯಾಸಿಸ್ಟ್ ನೀತಿಯನ್ನು ಧಿಕ್ಕರಿಸಿದ ಕರ್ನಾಟಕ ರಾಜ್ಯದ ಜನತೆ ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವು ಐಕ್ಯಮತದಿಂದ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದು, ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ ಎಂದು ನಿಯೋಗವು ತಿಳಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಚಿವ ಜಮೀರ್ ಅಹ್ಮದ್ ಮತ್ತಿತರರು ಇದ್ದರು.