ಭಟ್ಕಳ : ಕರ್ನಾಟಕ ರಾಜ್ಯ ಯೋಗಾಸನ ನಿರ್ಣಾಯಕರ ತರಬೇತಿ ಶಿಬಿರದಲ್ಲಿ ಭಟ್ಕಳ ವಿಧ್ಯಾಭಾರತಿ ಆಂಗ್ಲ ಮಾಧ್ಯಮದ ದೈಹಿಕ ಶಿಕ್ಷಕಿ ಸೀಮಾ ಈಶ್ವರ ನಾಯ್ಕ ಯೋಗಾಸನ ನಿರ್ಣಾಯಕ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಭಟ್ಕಳ ಮೂಲದ ಯುವತಿ ಗಂಡನಿಂದಲೇ ಕೊಲೆ

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಚ್ಚೇರಿಯ ಬೆಂಕಿ ಸಭಾಂಗಣದಲ್ಲಿ ಈ ಶಿಬಿರ ನಡೆದಿತ್ತು. ರಾಜ್ಯದ 25 ಜಿಲ್ಲೆಯ 55 ನಿರ್ಣಾಯಕರು ಮತ್ತು 15 ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯಿಂದ 8 ನಿರ್ಣಾಯಕರು ಶಿಬಿರದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಟ್ಕಳ ತಾಲೂಕಿನ ವಿದ್ಯಾ ಭಾರತಿ ಆಂಗ್ಲ ಮಾಧ್ಯಮದ ದೈಹಿಕ ಶಿಕ್ಷಕಿ ಸೀಮಾ ಈಶ್ವರ ನಾಯ್ಕ ಯೋಗಾಸನ ನಿರ್ಣಾಯಕ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಅಧ್ಯಕ್ಷ ಹಾಗೂ ಏಷ್ಯನ್ ಯೋಗ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ನಿರಂಜನ್ ಮೂರ್ತಿ, ದೆಹಲಿ ಯೋಗಾಸನ ಭಾರತ ಸಂಸ್ಥೆಯ ಜ್ಯೋತಿ ಶರ್ಮ ಮತ್ತು ನಿವೇದಿತ ವೀಕ್ಷಕ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಯೋಗಾಸನ ನಿರ್ಣಾಯಕ ರಾಜ್ಯ ಪ್ರಶಸ್ತಿ ಪಡೆದಿರುವುದಕ್ಕೆ ಭಟ್ಕಳ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ರೂಪ ರಮೇಶ ಖಾರ್ವಿ ಅಭಿನಂದಿಸಿದ್ದಾರೆ.