ಭಟ್ಕಳ: ತಾಲೂಕು ಆಸ್ಪತ್ರೆ ರಕ್ಷಾ ಸಮಿತಿಯ ಸಾಮಾನ್ಯ ಸಭೆಯು ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ  ಇಲ್ಲಿನ ತಾಲೂಕಾಸ್ಪತ್ರೆಯ ಸಭಾಗೃಹದಲ್ಲಿ ನಡೆಸಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ವೈದ್ಯಾಧಿಕಾರಿ ಡಾ.ಸವಿತಾ ಕಾಮತ ಮಾತನಾಡಿ, ಸರ್ಜನ್ ಡಾ.ಅರುಣ ಅವರು ಬೆಳಿಗ್ಗೆ ಬಂದು ಆಪರೇಷನ್ ಮಾಡಿ, ಸಂಜೆ 6 ಗಂಟೆಗೆ ಒಪಿಡಿಯಲ್ಲಿ ಕುಳಿತುಕೊಳ್ಳುತ್ತಾರೆ. ರಾತ್ರಿ ಒಂದು ಗಂಟೆಯ ತನಕ ರೋಗಿಗಳ ತಪಾಪಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ  ವಾರಕ್ಕೆ ಒಂದು ಅಥವಾ ಎರಡು ದಿನ ಆಪರೇಷನ್ ಮಾಡಲು ಸಮಯ ನಿಗದಿ ಮಾಡಬೇಕು. ಇನ್ನುಳಿದ ದಿನದಲ್ಲಿ ಒಪಿಡಿಯಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ರೋಗಿಗಳ ತಪಾಸಣೆ ಮಾಡುವಂತೆ ತೀರ್ಮಾನ ತೆಗೆದುಕೊಂಡಿದ್ದೇನೆ. ಸಚಿವರು ಇದಕ್ಕೆ ಅನುಮತಿ ನೀಡಿದರೆ ಇದನ್ನು ಜಾರಿಗೆ ತರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಇದಕ್ಕುತ್ತರಿಸಿದ ಸಚಿವ ಮಂಕಾಳ ವೈದ್ಯ, ಸದ್ಯ ಪ್ರತಿದಿನ ಓಟಿ ಸೌಲಭ್ಯ ಹೇಗೆ ನಡೆದುಕೊಂಡು ಬರುತ್ತಿದೆ ಅದೇ ರೀತಿ ಇರಲಿ. ಯಾವುದೇ ರೀತಿ ಬದಲಾವಣೆ ತರುವುದು ಬೇಡ. ಇರುವ  ವ್ಯವಸ್ಥೆಯನ್ನು ಸರಿಪಡಿಸಿ ಹೊಂದಿಸಿಕೊಂಡು ಹೋಗುವುದು ಉತ್ತಮ. ಬದಲಿ ವ್ಯವಸ್ಥೆ ಮಾಡಿದರೆ ಎಲ್ಲವೂ ಸಮಸ್ಯೆ ಆಗಲಿದೆ ಎಂದು ಸಚಿವರು ತಿಳಿಸಿದರು.

ಆಸ್ಪತ್ರೆಗೆ ಸೆಕ್ಯೂರಿಟಿ ಗಾರ್ಡ ಅವಶ್ಯಕತೆ ಇದೆ ಎಂದು ಸಚಿವರ ಬಳಿ ಡಾ.ಸವಿತಾ ಕೇಳಿಕೊಂಡಾಗ, ಸಚಿವ ಮಂಕಾಳ ವೈದ್ಯ ಡಿವೈಎಸ್ಪಿ ಗೆ ಕರೆ ಮಾಡಿ ಮಾಹಿತಿ ನೀಡಿದರು.

ಈಗ ಇರುವ ಲ್ಯಾಬ್ ಟೆಕ್ನಿಷಿಯನ್ ಗೆ ೧೦ ಸಾವಿರ ಇರುವ ಸಂಬಳ ೧೫ ಸಾವಿರ ಮಾಡಬೇಕೆಂಬ ಉದ್ದೇಶ ಇದೆ. ೨೫೦ ಹಾಸಿಗೆಯ ಆಸ್ಪತ್ರೆ ಮಾಡಲು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಇದು ಸರಕಾರದಿಂದ ಆಗುವ ಭರವಸೆ ಇದೆ. ಇವುಗಳು ಆದಲ್ಲಿ ಸರಕಾರಿ ಆಸ್ಪತ್ರೆ ಅಭಿವೃದ್ಧಿ ಆಗಲಿದೆ. ವೈಯಕ್ತಿಕವಾಗಿ ಏನಾದರು ಹಣದ ಸಮಸ್ಯೆ ಇದ್ದರೆ ನಾನು ನೀಡಲಿದ್ದೇನೆ. ಜನರೊಂದಿಗೆ ಉತ್ತಮ ಸ್ಪಂದನೆಯೊಂದಿಗೆ ವೈದ್ಯರ ವರ್ತನೆ ಇದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಮಂಕಾಳ ವೈದ್ಯ ಹೇಳಿದರು.

ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಯ ಯಂತ್ರ ತರಿಸಬೇಕೆಂದು ಮನವಿ ಮಾಡಿದ ಸಮಾಜ ಸೇವಕ ಇರ್ಷಾದ್, ಡಾ.ಅರುಣ ಮಧ್ಯರಾತ್ರಿ ತನಕ‌ ಕೆಲಸ ಮಾಡುತ್ತಿದ್ದಾರೆ.
ಆಸ್ಪತ್ರೆಗೆ ಒಳ್ಳೆ ಹೆಸರು ತಂದು ಕೊಟ್ಟಿದ್ದಾರೆ. ಆದರೆ ಆಸ್ಪತ್ರೆಯ ಕೆಲವು ನರ್ಸಗಳು ಉದ್ದೇಶ ಪೂರ್ವಕವಾಗಿ ಅವರ ಹೆಸರು ಹಾಳು ಮಾಡುತ್ತಿದ್ದಾರೆ. ಇಂತಹ ನರ್ಸಗಳಿಂದ ಸಮಸ್ಯೆ ಆಗುತ್ತಿದೆ ಎಂದು ಆರೋಪ ಮಾಡಿದರು.

ಸಭೆಯ ನಂತರ ಸಚಿವ ಮಂಕಾಳ ವೈದ್ಯ ಆಸ್ಪತ್ರೆಯ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಡಾ.ಸತೀಶ ಕುಮಾರ, ಡಾ.ಲಕ್ಷ್ಮೀಶ ನಾಯ್ಕ, ತಾಲೂಕಾಸ್ಪತ್ರೆ ಸದಸ್ಯರಾದ ಶಾರದಾ ಈಶ್ವರ ನಾಯ್ಕ, ಸುಧಾಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.