ಭಟ್ಕಳ: ತಾಲೂಕಿನ ಹಡೀನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿಗೆ ಮಕ್ಕಳ ಸಂತೆ (Makkala Santhe) ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಜಿ ನಾಯಕ ಈ ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ಯಲ್ವಡಿಕವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಗೊಂಡ ದೀಪ ಬೆಳಗಿದರು. ಎಸ್ಡಿಎಂಸಿ ಅಧ್ಯಕ್ಷೆ ವನಿತಾ ನಾಯ್ಕ ಉಪಸ್ಥಿತರಿದ್ದರು.
ಇದನ್ನು ಓದಿ: ಮಂಗಳೂರು ಬಳಿ ಅಪಘಾತದಲ್ಲಿ ಭಟ್ಕಳದ ಯುವಕ ಸಾವು
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಸುರೇಖಾ ಲಿಂಗು ಲಕ್ಷ್ಮೇಶ್ವರ ಸ್ವಾಗತಿಸಿದರು. ಸಹ ಶಿಕ್ಷಕಿ ಭಾಗ್ಯಶ್ರೀ ನಾರಾಯಣ ನಾಯ್ಕ ವಂದಿಸಿದರು. ಈ ಕಾರ್ಯಕ್ರಮದಲ್ಲಿ (Makkala Santhe) ಯಲ್ವಡಿಕವೂರು ಗ್ರಾಮ ಪಂಚಾಯತ್ ನ ಸದಸ್ಯರು, ಸಿ.ಆರ್.ಪಿ. ವಿಜಯ ಬಾಳಗಿ, ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಸಹ ಶಿಕ್ಷಕರಾದ ನಯನಾ ನಾಯ್ಕ, ಪ್ರಶಾಂತ್ ಕೆ, ಅತಿಥಿ ಶಿಕ್ಷಕಿ ಸೀಮಾ ನಾಯ್ಕ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
ಇದನ್ನು ಓದಿ: Stone temple/ ಪಶುಪತಿ ದೇವರಿಗೆ ಶಿಲಾಮಯ ಗುಡಿ



