ಭಟ್ಕಳ : ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಗರ ಕೈವಾಡವಿದೆ ಎಂಬ ಸಚಿವರ ಬೇಜವಾಬ್ದಾರಿ ಹೇಳಿಕೆ ಅವರ ಗೌರವಕ್ಕೆ ಶೋಭೆ ತರುವುದಿಲ್ಲ ಎಂದು ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಶ್ಮೀ ನಾರಾಯಣ ನಾಯ್ಕ ಹೇಳಿದ್ದಾರೆ.
ಇದನ್ನೂ ಓದಿ : ಹೊನ್ನಾವರ ಮಹಿಳೆಯಿಂದ ಲಂಚ : ಸೊರಬದಲ್ಲಿ ಲೋಕಾಯುಕ್ತ ದಾಳಿ
ಅವರು ಇಲ್ಲಿನ ಮಣ್ಕುಳಿ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಚಿವ ಮಂಕಾಳ್ ವೈದ್ಯರ ಹೇಳಿಕೆ ವಿರೋಧಿಸಿ ಮಾತನಾಡಿದರು. ಕೆಲವು ತಿಂಗಳುಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿ ಹಾಗೂ ಭಯೋತ್ಪಾಕರಿಗೆ ಬೆಂಬಲ ನೀಡಿತ್ತಾ ಬಂದಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಬಿಜೆಪಿಗರೇ ಮಾಡಿದ್ದಾರೆ ಎನ್ನುವುದಾದರೆ ರಾಜ್ಯದಲ್ಲಿ ಇರುವ ತಮ್ಮದೇ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದಿದ್ದಾರೆ.
ಈ ವಿಡಿಯೋ ನೋಡಿ : ಭಟ್ಕಳದಲ್ಲಿ ಇಬ್ಬರು ಆರೋಪಿಗಳ ವಿಚಾರಣೆ https://fb.watch/qE3nbCUWLA/?mibextid=Nif5oz
ಬಿಜೆಪಿಗರು ಯಾವತ್ತಿಗೂ ಭಯೋತ್ಪಾದರ ಬೆಂಬಲಕ್ಕೆ ನಿಂತಿಲ್ಲ. ನಾವು ಧರ್ಮದ ರಕ್ಷಣೆ ಹಾಗೂ ದೇಶದ ರಕ್ಷಣೆ ವಿರುದ್ಧ ಯಾರು ನಡೆಯುತ್ತಾರೋ ಅವರ ವಿರುದ್ಧ ಹೋರಾಟ ನಡೆಸುತ್ತೇವೆ. ರಾಜ್ಯ ಸಭಾ ಸದಸ್ಯರ ಬೆಂಬಲಿಗರು ವಿಧಾನಸಭಾ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರು ಕೂಡ ನಮ್ಮ ಸಚಿವರು ಹಾಗೂ ಕಾಂಗ್ರೆಸ್ ಸರ್ಕಾರ ಅವರು ಘೋಷಣೆ ಕೂಗಿಲ್ಲ ಎಂದು ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ಸಮರ್ಥಿಸಿಕೊಳ್ಳುವುದರ ಜೊತೆಯಲ್ಲಿ ರಾಜ್ಯದಲ್ಲಿ ಉಗ್ರಗಾಮಿ ಹಾಗೂ ಕುಕೃತ್ಯ ಮಾಡುವವರಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಂತೆ ಕಾಣುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ತಮ್ಮ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಹೇಳಿಕೆ ನೀಡುವ ಭರದಲ್ಲಿ ಒಂದು ಸಮುದಾಯದ ಓಲೈಕೆಯ ರಾಜಕಾರಣ ಮಾಡುತ್ತಿರುವುದು ಕಂಡುಬರುತ್ತದೆ. ಇದನ್ನು ಭಟ್ಕಳ ಬಿಜೆಪಿ ಮಂಡಲ ತೀರ್ವವಾಗಿ ಖಂಡಿಸುತ್ತದೆ ಎಂದರು.
ಲೋಕಸಭೆ ಚುನಾವಣೆಯ ಜಿಲ್ಲಾ ಸಂಚಾಲಕ ಗೋವಿಂದ ನಾಯ್ಕ ಮಾತನಾಡಿ, ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ರವರು ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದಾರೆ. ಯಾಕೆ ಈ ಹೇಳಿಕೆ ನೀಡುತ್ತಿದ್ದೇನೆ ಎನ್ನುವ ಬಗ್ಗೆ ಯೋಚಿಸಿ ಹೇಳಿಕೆ ನೀಡಬೇಕಾಗಿತ್ತು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದ ನಂತರ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಬಳಿಕ ತಕ್ಷಣ ಕ್ರಮ ಕೈಗೊಂಡರೆ ಈ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಆಗುತ್ತಿರಲಿಲ್ಲ. ಕಾಂಗ್ರೆಸ್ಸಿನ ಈ ಮೃದು ಧೋರಣೆಯಿಂದಲೇ ರಾಮೇಶ್ವರದಲ್ಲಿ ಬಾಂಬ್ ಸ್ಫೋಟ ಆಗಿದೆ. ಬಳಿಕ ಬಿಜೆಪಿ ಕಾರ್ಯಕರ್ತರು ಬಾಂಬ್ ಸ್ಪೋಟ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಸಚಿವರು ನೀಡಿದ್ದಾರೆ. ಸಚಿವರಿಗೆ ಭಟ್ಕಳದ ಬಗ್ಗೆ ಅರಿವೇ ಇಲ್ಲವೇ? ಈ ದೇಶದಲ್ಲಿ ಎಲ್ಲೇ ಒಂದು ಕೃತ್ಯ ನಡೆದರೂ ಅದರ ಮೂಲ ಜಾಗವನ್ನು ಹುಡುಕುತ್ತಾ ಬಂದರೆ ಭಟ್ಕಳ ಎನ್ನುವುದು ಜಗಜ್ಜಾಹೀರಾಗುತ್ತದೆ. ಮಂಕಾಳ ವೈದ್ಯರು ಸಚಿವರಾಗಿ ಒಂದು ಕೋಮುವಿನ ಓಲೈಕೆಗಾಗಿ ಇಂಥ ಹೇಳಿಕೆ ನೀಡುವುದು ನೋವಿನ ಸಂಗತಿ. ಚುನಾವಣೆ ಸಂದರ್ಭದಲ್ಲಿ ತೆಗೆದುಕೊಂಡ ಒಂದು ಲಕ್ಷದ ಮೂವತ್ತು ಸಾವಿರ ಮತದಲ್ಲಿ 80000 ಮತವನ್ನು ಹಿಂದುಗಳು ನೀಡಿದ್ದಾರೆ. ಇದನ್ನು ಯೋಚನೆ ಮಾಡಬೇಕು ಎಂದರು.
ತಂಜೀಮ್ ಸಂಸ್ಥೆಯ ಜೊತೆಗೆ ಹೋಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಹಿಂದುಗಳು ಪೂಜಿಸುವ ಗೋಗಳನ್ನು ಹತ್ಯೆ ಮಾಡುವಂಥ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ಮನವಿ ನೀಡುತ್ತಾರೆ. ಹಿಂದುಗಳು ಇದನ್ನೆಲ್ಲ ಗಮನಿಸುತ್ತಿದ್ದಾರೆ. ಹಿಂದೂ ವಿರೋಧಿ ನೀತಿಯಿಂದ 2018ರಲ್ಲಿ ಯಾವ ರೀತಿ ತಿರುಗೇಟು ನೀಡಿದ್ದಾರೆ ಅಂತ ಸಚಿವರು ಯೋಚನೆ ಮಾಡಬೇಕು. ಇನ್ನು ಮುಂದೆ ಹಿಂದೂ ವಿರೋಧಿ ಹೇಳಿಕೆಯನ್ನು ನೀಡಿದ್ದಲ್ಲಿ ನಾವು ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಅದಕ್ಕಾಗಿ ಇಂಥ ಹಾಸ್ಯಾಸ್ಪದ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಬೇಕು ಎಂದರು
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಸಚಿವರು ಎಲ್ಲದಕ್ಕೂ ಹೇಳಿಕೆಯನ್ನು ಕೊಟ್ಟು ನಂತರ ಸುಮ್ಮನಿರುತ್ತಾರೆ. ವೈದ್ಯರು ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುವುದು ಒಳ್ಳೆಯದು. ರಾಜಕೀಯವಾಗಿ ನಮ್ಮ ತತ್ವ ಸಿದ್ಧಾಂತಗಳು ಮತ್ತು ಧ್ಯೇಯಗಳು ಬೇರೆಯಾಗಿರುತ್ತದೆ. ಆದರೆ ಧರ್ಮ ಅಂತ ಬಂದಾಗ ಧರ್ಮದ ಬಗ್ಗೆ ಎಲ್ಲರೂ ಒಂದಾಗಬೇಕಾಗುತ್ತದೆ. ಬಿಜೆಪಿಯ ಕಾರ್ಯಕರ್ತರ ವಿರುದ್ಧ ಇಲ್ಲ ಸಲ್ಲದ ಹೇಳಿಕೆಯನ್ನು ನೀಡಿ ಬಿಜೆಪಿಯ ಕಾರ್ಯಕರ್ತರ ಎದೆಗುಂದಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರದ ಮೂಲಕ ನಮ್ಮನ್ನು ಹತ್ತಿಕ್ಕಲು ಖಂಡಿತ ಸಾಧ್ಯವಿಲ್ಲ ಎಂದರು.
ಸಚಿವರೆ, ನಿಮ್ಮ ಹೇಳಿಕೆ ಸರಿಯಲ್ಲ. ನೀವು ಎಷ್ಟೇ ತುಳಿಯಲು ಪ್ರಯತ್ನಿಸಿದರೂ ನಾವು ಮತ್ತೆ ಮತ್ತೆ ಚಿಗುರಿ ಬರುತ್ತೇವೆ. ನೀವು ಇನ್ನು ಮುಂದೆ ಹೇಳಿಕೆಯನ್ನು ನೀಡುವಾಗ ನಿಮ್ಮ ಬುದ್ಧಿಯನ್ನು ಉಪಯೋಗಿಸಿ ಹೇಳಿಕೆ ನೀಡಿ. ನಿಮ್ಮ ಹಾಸ್ಯಾಸ್ಪದ ಹೇಳಿಕೆ ನೋಡಿ ನಮಗೆ ನಗು ಬರುತ್ತದೆ. ನೀವು ಒಂದು ಒಳ್ಳೆಯ ಸ್ಥಾನದಲ್ಲಿ ಇದ್ದೀರಿ ಅದಕ್ಕಾಗಿ ನೀವು ವಿಚಾರ ಮಾಡಿ ಮಾತನಾಡುವುದು ಒಳ್ಳೆಯದು. ನೀವು ನಿಮ್ಮ ಮಾತಿಗೆ ಬದ್ಧರಾಗಿರಬೇಕು. ನೀವು ಸಚಿವರಾದ ಕಾರಣ ನಿಮ್ಮ ಮಾತಿಗೆ ಬೆಲೆ ಇರುತ್ತದೆ. ಆದ ಕಾರಣ ಇಲ್ಲಸಲ್ಲದ ಹೇಳಿಕೆಯನ್ನು ನೀಡಬೇಡಿ ಎಂದು ಶಿವಾನಿ ಶಾಂತಾರಾಮ ಹೇಳಿದರು.
ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಮಾತನಾಡಿ, ಈಗಿನ ಸಚಿವರು ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗುವಾಗ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಆಗ ಶೇಕಡಾ 100 ರಷ್ಟು ಹಿಂದುಗಳ ಮತವನ್ನು ತೆಗೆದುಕೊಂಡು ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ಭಟ್ಕಳದಲ್ಲಿ ಭಯೋತ್ಪಾದಕರಿಲ್ಲ ಎಂದು ಹೇಳಿಕೆ ನೀಡಿದ್ದೀರಿ. ಈಗ ಶೇಕಡ 80ರಷ್ಟು ಹಿಂದುಗಳ ಮತವನ್ನು ಪಡೆದು ಆಯ್ಕೆಯಾಗಿ ಸಚಿವರಾಗಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೀರಿ. ಅಲ್ಪಸಂಖ್ಯಾತರ ಓಲೈಕೆಗಾಗಿ ಬಿಜೆಪಿಯವರು ಬಾಂಬ್ ಸ್ಫೋಟ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದೀರಿ. ಇಂಥಹ ಕ್ಷುಲ್ಲಕ ಹೇಳಿಕೆಯನ್ನು ನೀಡಿ ನೀವು ಸಣ್ಣರಾಗುತ್ತೀರಿ. ನಮ್ಮ ಕಾರ್ಯಕರ್ತರು ಯಾವಾಗಲೂ ಬಾಂಬ್ ಸ್ಪೋಟ ಮಾಡುವುದಾಗಲಿ ಬಾಂಬ್ ಸ್ಪೋಟ ಮಾಡಿದವರಿಗೆ ಬೆಂಬಲಿಸುವುದಾಗಲಿ ಮಾಡಲಿಲ್ಲ. ಮೊನ್ನೆ ದಿನ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲೇ ಇಲ್ಲ ಎಂದು ಹೇಳಿಕೆ ನೀಡಿದ್ದೀರಿ. ಮತ್ತೆ ಯಾಕೆ ಮೂರು ಜನರನ್ನು ಬಂಧಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರಿಗೆ ಬೆಂಬಲಿಸುವ ಮಾನಸಿಕತೆ ಹೊಂದಿರುವ ಸರ್ಕಾರ ಮತ್ತು ಸಚಿವರು ನೀವು. ಇಸ್ಲಾಂ ಜಿಂದಾಬಾದ್ ಎಂದು ಹೇಳಿದರೆ ನಮಗೆ ಅಭ್ಯಂತರವಿಲ್ಲ. ಆದರೆ ನೀವು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದರು ಸಹ ಹೇಳಿಕೆ ನೀಡಿಲ್ಲ ಎನ್ನುತ್ತ ಎಫ್ ಎಸ್ ಎಲ್ ವರದಿ ಬರುವ ತನಕ ಕಾಯುತ್ತೀರಿ ಅಂದರೆ ನಿಮ್ಮ ಮಾನಸಿಕತೆ ಯಾವ ರೀತಿ ಇದೆ ಎಂದು ನಾವು ತಿಳಿಯಬೇಕಾಗಿದೆ ಎಂದರು.
ಹತ್ತು ವರ್ಷದಿಂದ ಕಾಂಗ್ರೆಸ್ ಮಾನಸಿಕತೆಯನ್ನು ನೋಡುತ್ತಾ ಬಂದಿದ್ದೇವೆ. ಯಾಸೀನ್ ಭಟ್ಕಳ ಬಂಧಿಸಿದಾಗ ರಾಹುಲ್ ಗಾಂಧಿಯವರು ಯಾಸಿನ್ ಜಿ ಎಂದು ಸಂಬೋಧಿಸಿದ್ದಾರೆ. ಹಾಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾಸಿನ್ ಭಟ್ಕಳರವರು ಅರೆಸ್ಟ್ ಆಗಿದ್ದಾರೆ ಎಂದು ಸಂಬೋಧಿಸಿದ್ದಾರೆ. ಇವರು ಅಲ್ಪಸಂಖ್ಯಾತರ ಓಲೈಕೆಗಾಗಿ ಯಾವ ರೀತಿ ಬೇಕಾದರೂ ಮಾಡುತ್ತಾರೆ. ಬಾಂಬ್ ಸ್ಫೋಟ ಯಾರೂ ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಕಾರ್ಯಕರ್ತರೇ ಮಾಡಿದರು ಸಹ ನಾವು ಅವರನ್ನು ಬೆಂಬಲಿಸುವದಿಲ್ಲ. ಅಂಥವರಿಗೆ ಶಿಕ್ಷೆ ಆಗಬೇಕು. ಅದು ಬಿಟ್ಟು ಒಬ್ಬರನ್ನು ಓಲೈಸುವ ಸಲುವಾಗಿ ಇಲ್ಲಸಲ್ಲದ ಹೇಳಿಕೆ ನೀಡುವುದು ಉಸ್ತುವಾರಿ ಸಚಿವರಾದವರಿಗೆ ಶೋಭೆಯಲ್ಲ ಎಂದು ಸುಬ್ರಾಯ ದೇವಡಿಗ ಹೇಳಿದರು.
ಬಿಜೆಪಿ ಸರ್ಕಾರ ಬಡವರಿಗಾಗಿ ಏನೂ ಮಾಡುವುದಿಲ್ಲ ಎಂದು ಕಾಂಗ್ರೆಸಿಗರು ಆಪಾದನೆ ಮಾಡುತ್ತಾರೆ. ಬಡವರಿಗಾಗಿ ಮಾಡದೆ ಇದ್ದರೆ ಬಿಜೆಪಿ ಗೆಲ್ಲುತ್ತಿರಲಿಲ್ಲ. ಬಿಜೆಪಿ ಮೊದಲ ಬಾರಿಗೆ 280 ಸೀಟನ್ನು ಗೆದ್ದಿದೆ ಎರಡನೇ ಬಾರಿಗೆ 320 ಸೀಟ್ಗಳನ್ನು ಗೆದ್ದಿದೆ. ಈಗ 400 ಸ್ಥಾನ ಗೆಲ್ಲುವ ಕೆಲಸ ಮಾಡಿದ್ದಾರೆ. 10 ಕೆಜಿ ಅಕ್ಕಿಯನ್ನು ನೀಡಿದ್ದೇವೆ. ಅದು ಬಡವರಿಗಾಗಿ ಮಾಡಿದ್ದಲ್ಲವೇ? ಎಲ್ಲಾ ಜನರಿಗೆ ಫ್ರೀಯಾಗಿ ವ್ಯಾಕ್ಸಿನ್ ನೀಡಿದ್ದೇವೆ. ಅದು ಬಡವರಿಗೆ ಆಗಿಲ್ಲವೇ? ಬಿಜೆಪಿ ಚುನಾವಣೆ ಪ್ರಣಾಳಿಕೆ ಸಲುವಾಗಿ ಬಡವರಿಗೆ ಸವಲತ್ತುಗಳನ್ನು ನೀಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಡವರಿಗೆ ಗ್ಯಾರಂಟಿಗಳನ್ನು ನೀಡಿ ವೋಟ್ ಪಡೆದಿದೆ. ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರು ಯಾವುದೇ ಬಾಂಬ್ ಸ್ಫೋಟಕ್ಕೆ ಬೆಂಬಲ ನೀಡಿಲ್ಲ, ನೀಡುವುದೂ ಇಲ್ಲ. ಬಾಂಬ್ ಸ್ಫೋಟ ಮಾಡುವವರಿಗೆ ಹಾಗೂ ಅವರಿಗೆ ಬೆಂಬಲ ನೀಡುವವರು ಕಾಂಗ್ರೆಸ್ಸಿಗರು ಹೊರತೂ ಬಿಜೆಪಿಗಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಭಾಸ್ಕರ ದೈಮನೆ, ಮಂಡಲ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮೋಹನ ನಾಯ್ಕ, ಅರುಣ ನಾಯ್ಕ ಉಪಸ್ಥಿತರಿದ್ದರು