ಹೊನ್ನಾವರ: ಉತ್ತರ ಕನ್ನಡ (Uttara Kannada) ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರುಗಳ (Narayan Guru) ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಹೊನ್ನಾವರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಭಟ್ಕಳ (Bhatkal) ಹಾಗೂ ಹೊನ್ನಾವರ (Honnavar) ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು (honour).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ನಿವೃತ್ತ ಶಿಕ್ಷಕ, ಸಹಕಾರಿ ಧುರೀಣ, ಸಮಾಜ ಸೇವಕ ಹಾಗೂ ನಾಮಧಾರಿ ಸಮಾಜದ ಹಿರಿಯರಾದ ಡಿ ಬಿ ನಾಯ್ಕ ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು (honour). ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಮುರ್ಡೇಶ್ವರದ ಶಿವಾನಂದ ಡಿ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನು ಓದಿ: Municipal Council/ ನಗರಸಭೆಗೆ ಇನ್ನಷ್ಟು ಗ್ರಾ ಪಂ ಸೇರಿಸಲು ಅಭ್ಯಂತರವಿಲ್ಲ: ಮಂಕಾಳ ಎಸ್ ವೈದ್ಯ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನಾವರದ ನಾಮಧಾರಿ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ನ್ಯಾಯವಾದಿ ವಿಕ್ರಮ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ನೀಲಗೋಡು ಯಕ್ಷ ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಸ್ವಾಮಿ, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ (Surathkal), ಕಾರವಾರದ (Karwar) ನ್ಯಾಯವಾದಿ ನಾಗರಾಜ ನಾಯಕ, ಶಿರಾಲಿ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್ ಕೆ ನಾಯ್ಕ, ಭಟ್ಕಳ ತಾಲೂಕು ನಾಮಧಾರಿ ಸೇವಾ ಸಮಿತಿ ಅಧ್ಯಕ್ಷ ಭವಾನಿ ಶಂಕರ ನಾಯ್ಕ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಚಾರ್ಯ ಡಾ ಗಣಪತಿ ಗೌಡ, ಬೆಂಗಳೂರು (Bengaluru) ವಿಶ್ವವಿದ್ಯಾಲಯದ ರಾಸಾಯನಶಾಸ್ತ್ರದ ಪ್ರಾಧ್ಯಾಪಕ ಡಾ ಬಾಬು ಗಿರಿಯ ಗೌಡ, ಭಟ್ಕಳದ ನಾರಾಯಣ ಗುರು ಸಮಿತಿಯ ಸಂಚಾಲಕ ಸತೀಶ ಕುಮಾರ್ ನಾಯ್ಕ, ಮಂಕಿಯ ಗೋಲ್ ಇಂಟರ್ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಭಟ್ಕಳದ ದೇವಾಡಿಗರ ಸಂಘದ ಕಾರ್ಯದರ್ಶಿ ಸುರೇಶ ದೇವಾಡಿಗ, ಬೆಳಕೊಂಡ ಮೀನುಗಾರರ ಸಂಘದ ಅಧ್ಯಕ್ಷ ಉಮೇಶ ಮೇಸ್ತ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನು ಓದಿ: KDP meeting/ ‘ಕಂದಾಯ ಇಲಾಖೆಯವರೇ ಏಜೆಂಟರನ್ನು ಮಾಡುತ್ತಿದ್ದಾರೆ’



