ಹೊನ್ನಾವರ; ಪಟ್ಟಣದ ಕರ್ನಲ್ ಹಿಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬೃಹತ್ ಬಂಡೆ ಸಮೇತ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಹೊನ್ನಾವರದದಲ್ಲಿ ಗುಡ್ಡಕುಸಿತ : ಫೇಸ್‌ಬುಕ್ ವಿಡಿಯೋ / ಇನ್ಸ್ಟಾಗ್ರಾಂನಲ್ಲಿ ವಿಡಿಯೋ
ಕಳೆದ ಹತ್ತು ವರ್ಷದಿಂದ ಹೆದ್ದಾರಿ ಅಗಲೀಕರಣದ ಹೆಸರಿನಲ್ಲಿ ಗುಡ್ಡದ ಮಣ್ಣು ತೆಗೆಯಲಾಗುತ್ತಿದೆ. ಐ.ಆರ್.ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಜಿಲ್ಲೆಯಲ್ಲಿ ಪದೇ ಪದೇ ಗುಡ್ಡ ಕುಸಿತದ ಪ್ರಕರಣಗಳು ವರದಿಯಾಗುತ್ತಿವೆ.
ರವಿವಾರ ಮುಂಜಾನೆಯಿಂದಲೇ ಮುಂಗಾರು ಮಳೆಯ ಆರ್ಭಟ ತಾಲೂಕಿನಲ್ಲಿ ಮುಂದುವರೆದಿದೆ. ಮುಂಜಾನೆ ೭.೩೦ರ ಸುಮಾರಿಗೆ ಬೃಹತ್ ಬಂಡೆಗಲ್ಲು ಸಮೇತ ಮಣ್ಣು, ಮರಗಳು ಹೆದ್ದಾರಿ ೬೬ರಲ್ಲಿ ಬಿದ್ದವು. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಐಆರ್ ಬಿ ಸಿಬ್ಬಂದಿ ಜೆಸಿಬಿ ಮೂಲಕ ಹೆದ್ದಾರಿ ಮೇಲೆ ಬಿದ್ದ ಮಣ್ಣು ತೆರವು ಮಾಡುವ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ : ಭಟ್ಕಳ ತಾಲೂಕಿನಾದ್ಯಂತ ಎರಡ್ಮೂರು ದಿನಗಳಿಂದ ವರುಣಾರ್ಭಟ