ಕುಮಟಾ : ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ದುರ್ಘಟನೆ ಸಂದರ್ಭ ಮಣ್ಣಿನಡಿ ಸಿಲುಕಿದ ಜಗನ್ನಾಥ ಜಟ್ಟಿ ನಾಯ್ಕ (61) ಈವರೆಗೆ ಪತ್ತೆಯಾಗಿಲ್ಲ. ಇದು ಕುಟುಂಬದವರನ್ನು ಆತಂಕಕ್ಕೀಡು ಮಾಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಜಗನ್ನಾಥ ನಾಯ್ಕ ಮೂಲತಃ ಕುಮಟಾ ಬಾಡ- ಹುಬ್ಬಣಗೇರಿಯ ಗ್ರಾಮದ ‘ಮಾಬ್ಲು ಮನೆ’ ಕುಟುಂಬದವರು. ಶಿರೂರು ದುರ್ಘಟನೆಯಲ್ಲಿ ಜಗನ್ನಾಥ ನಾಯ್ಕ ಮಣ್ಣಿನಡಿ ಸಿಲುಕಿದ್ದರು. ಇವರು ಟೀ ಶಾಪ್ ಮಾಲಕ ಮೃತ ಲಕ್ಷಣ ನಾಯ್ಕ ಅವರ ಬಾವ. ಲಕ್ಷ್ಮಣ ನಾಯ್ಕ ಅವರ ಅಕ್ಕನನ್ನು ಮದುವೆಯಾದ ನಂತರ ಜಗನ್ನಾಥ ನಾಯ್ಕ ಶಿರೂರಿನಲ್ಲಿಯೇ ಸಣ್ಣ ಮನೆ ಕಟ್ಟಿಕೊಂಡು ತನ್ನ ಸಂಸಾರದೊಟ್ಟಿಗೆ ಬಾಳುತ್ತಿದ್ದರು. ಇವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಓರ್ವ ಮಗಳನ್ನು ಮದುವೆ ಮಾಡಿದ್ದಾರೆ. ಇನ್ನೀರ್ವರು ಹೆಣ್ಣು ಮಕ್ಕಳು ಕಾಲೇಜು ವಿದ್ಯಾಭ್ಯಾಸ ಮುಗಿಸಿಕೊಂಡಿದ್ದಾರೆ.

ಇದನ್ನೂ ಓದಿ : ರಾಬಿತಾ ಎಕ್ಸಲೆನ್ಸ್ ಅವಾರ್ಡ್ ನ್ಯೂ ಶಮ್ಸ್ ಸ್ಕೂಲ್ ಮಡಿಲಿಗೆ

ಶಿರೂರು ಗುಡ್ಡಕುಸಿತ ದುರ್ಘಟನೆ ದಿನದಂದು ಜಗನ್ನಾಥ ಮುಂಜಾನೆ ೭ ಗಂಟೆಗಷ್ಟೇ ಬಾವ ಲಕ್ಷ್ಮಣ ನಾಯ್ಕ ಅವರ ಟೀ ಶಾಪ್ ಗೆ ಕೆಲಸಕ್ಕೆ ಸಹಕರಿಸಲು ಹೋಗಿದ್ದರು. ಲಕ್ಷ್ಮಣ ನಾಯ್ಕ ದಂಪತಿಗೆ ಕೆಲ ದಿನಗಳಿಂದ ಜ್ವರ ಇದ್ದರಿಂದ ಸ್ವಲ್ಪ ದಿನದ ಮಟ್ಟಿಗೆ ಟೀ ಶಾಪ್ ಕೆಲಸದಲ್ಲಿ ಸಹಕರಿಸಲು ಬಾವ ಜಗನ್ನಾಥ ನಾಯ್ಕ ಅವರಿಗೆ ಕೇಳುಕೊಂಡಿದ್ದರಿಂದ ಅವರು ಮುಂಜಾನೆಯೇ ಟೀ ಶಾಪ್ ಗೆ ಬಂದು ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ ಮುಂಜಾನೆ ೮.೩೦ ಗಂಟೆಗೆ ಈ ದುರ್ಘಟನೆ ನಡೆದಿತ್ತು.